×
Ad

ಮಂಗಳೂರು : ಪೆರ್ಮುದೆ - ಎನ್‌ಐಎ ದಿಂದ ಶಂಕಿತ ಆರೋಪಿ ವಶಕ್ಕೆ

Update: 2016-01-22 23:43 IST

ಮಂಗಳೂರು, ಜ.22: ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ)ವು ಇಂದು ಬೆಳಗ್ಗಿನ ಜಾವ ಪೆರ್ಮುದೆ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತ ಆರೋಪಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದೆ.

ಪೆರ್ಮುದೆ ಬಳಿ ಬಟ್ರಕೆರೆಯ ನಿವಾಸಿ ಸೈಫುಲ್ ಹುದಾ ಹಾಗೂ ಮಾಹಿರಾ ಖಾತೂನ್ ದಂಪತಿಯ ಪುತ್ರ ನಜ್ಮುಲ್ ಹುದಾ (25) ಪೊಲೀಸರ ವಶಕ್ಕೊಳಗಾದ ಶಂಕಿತ ಆರೋಪಿ.

 ಬಿಹಾರ ಮೂಲದ ಈ ದಂಪತಿಗೆ ನಾಲ್ಕುಮಕ್ಕಳು. ಮೂವರುಹೆಣ್ಣು ಹಾಗೂ ಹಿರಿಯ ಪುತ್ರನೇ ನಜ್ಮುಲ್ ಹುದಾ. ಕಳೆದ 20ಕ್ಕೂ ಅಕ ವರ್ಷಗಳಿಂದ ಪೆರ್ಮುದೆಯ ಬಟ್ರಕೆರೆಯಲ್ಲಿ ಈ ಕುಟುಂಬ ವಾಸವಾಗಿದೆ. ತಂದೆಸೈುಲ್ ಹುದಾಮನೆ ಹತ್ತಿರದಲ್ಲಿರುವ ಉಸ್ಮಾನಿಯಾ ಮುಹಮ್ಮದಿಯಾ ಮಸೀದಿಯ ಇಮಾಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಂಗಳೂರಿನ ಕೆಪಿಟಿಯಲ್ಲಿ ಪಾಲಿಮಾರ್ ಡಿಪ್ಲೊಮಾ ಮುಗಿಸಿದ ನಜ್ಮುಲ್ ಹುದಾ ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಕೆಮಿಕಲ್ ಎಂಜಿನಿಯರ್ ವಿದ್ಯಾರ್ಥಿಯಾಗಿದ್ದು, ಕಳೆದ ಮೇ ತಿಂಗಳಲ್ಲಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಎಂದುಹೇಳಲಾಗಿದೆ.

*ಪೊಲೀಸರ ಕಾರ್ಯಾಚರಣೆ: ರಾಷ್ಟ್ರೀಯತನಿಖಾತಂಡದಸುಮಾರು 25 ಮಂದಿ ಅಕಾರಿಗಳು ಹಾಗೂ ಸ್ಥಳೀಯ ಸುಮಾರು 50ಕ್ಕೂ ಹೆಚ್ಚಿನ ಪೊಲೀಸರ ನೆರವಿನೊಂದಿಗೆ ಇಂದು ಬೆಳಗ್ಗಿನ ಜಾವ ಸುಮಾರು 2:30ಕ್ಕೆ ನಜ್ಮುಲ್ ಹುದಾಎಂಬವರ ಮನೆಯ ಹಿಂಬದಿಯ ಬಾಗಿಲಿಗೆ ಚಿಲಕ ಹಾಕಿ ದಾಳಿ ನಡೆಸಿದ್ದಾರೆ.ಮನೆಯೊಳಗೆ ಪ್ರವೇಶಿಸಿದ ಪೊಲೀಸರು 2:30ರಿಂದ ಸುಮಾರು ಬೆಳಗ್ಗೆ 6 ಗಂಟೆಯವರೆಗೆ ನಜ್ಮುಲ್ ಹುದಾನನ್ನು ವಶಕ್ಕೆ ಪಡೆದುವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಪೊಲೀಸರು ಮನೆಯಲ್ಲಿದ್ದ  ಮೊಬೈಲ್ಫೋನ್‌ಗಳು, ಲ್ಯಾಪ್‌ಟಾಪ್, ಪೆನ್‌ಡ್ರೈವ್, ಕೆಲವು ಉರ್ದು ಸಾಹಿತ್ಯದ ಪುಸ್ತಕಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.

ಬಜ್ಪೆ ಸಮೀಪದ ಪೆರ್ಮುದೆಯಲ್ಲಿನ ತನ್ನ ಸ್ನೇಹಿತನೋರ್ವ ಬೆಂಗಳೂರಿಗೆ ತೆರಳಿದ್ದರಿಂದ ನಜ್ಮುಲ್ ಹುದಾ ಆತನ ಅಂಗಡಿಯನ್ನು ಕೆಲವು ದಿನಗಳ ಮಟ್ಟಿಗೆ ನಡೆಸುತ್ತಿದ್ದು, ಹೆಚ್ಚಿನ ಸಮಯವನ್ನು ಮೊಬೈಲ್ ಅಂಗಡಿಯಲ್ಲೇ ಕಳೆಯುತ್ತಿದ್ದ ಎನ್ನಲಾಗಿದೆ.

*ಫಲಿತಾಂಶಕ್ಕಾಗಿಕಾಯುತ್ತಿದ್ದ...

ಕೆಮಿಕಲ್ ಎಂಜಿನಿಯರಿಂಗ್ ಪರೀಕ್ಷೆ ಬರೆದು ಲಿತಾಂಶಕ್ಕಾಗಿ ಕಾಯುತ್ತಿದ್ದ ಈತ, ತನ್ನ ತಂದೆ ಸ್ಥಳೀಯ ಮಸೀದಿಯೊಂದರಲ್ಲಿ ಇಮಾಮ್ ಆಗಿ ಕರ್ತವ್ಯ ನಿರ್ವಹಿಸುತ್ತಾ, ಕಷ್ಟದ ಜೀವನವನ್ನು ಸಾಗಿಸುತ್ತಿದ್ದ್ದುರಿಂದಜೀವನೋಪಾಯಕ್ಕಾಗಿ ಒಳ್ಳೆಯ ಉದ್ಯೋಗವೊಂದನ್ನು ನಿರೀಕ್ಷಿಸುತ್ತಿದ್ದ ಎಂದುಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಲ್ಯಾಪ್‌ಟಾಪ್ ಮೂಲಕ ಅಂತರ್ಜಾಲದಲ್ಲಿ ಉದ್ಯೋಗವನ್ನು ಅರಸುತ್ತಾ, ವಿವಿಧ ಕಂಪೆನಿಗಳಿಗೆ ಅರ್ಜಿಯನ್ನು ಹಾಕಿದ್ದ ಎಂದು ಹೇಳಲಾಗುತ್ತಿದೆ.

*ಪಾರ್ಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ : ಈ ನಡುವೆಸೈುಲ್ ಹುದಾ ವಿದೇಶದಲ್ಲಿರುವ ಅಳಿಯನೊಂದಿಗೆ ತನ್ನ ಪುತ್ರ ನಜ್ಮುಲ್ ಹುದಾಗೆ ಒಳ್ಳೆಯ ಕೆಲಸವೊಂದನ್ನು ದೊರಕಿಸಿಕೊಡುವಂತೆ ಮನವಿ ಮಾಡಿದ್ದರು.

‘‘ನಜ್ಮುಲ್ ಹುದಾರ ಫಲಿತಾಂಶ ಬರಲಿ... ಫಲಿತಾಂಶ ನೋಡಿಉತ್ತಮಜಾಬ್‌ನ್ನು ಹುಡುಕುವ.ಅದಕ್ಕಿಂತಮೊದಲು ಪಾರ್ಸ್‌ಪೋರ್ಟ್ ಮಾಡಿಸಿ’’ ಎಂದುಅಳಿಯಸಲಹೆ ನೀಡಿದ್ದರುಎನ್ನಲಾಗಿದೆ.

ಅಲ್ಲದೆ, ನಜ್ಮುಲ್ ಹುದಾ ಕೂಡಾ ಅಂತರ್ಜಾಲದ ಮೂಲಕ ವಿದೇಶದಲ್ಲಿ ಉದ್ಯೋಗವನ್ನು ಅರಸುತ್ತಿದ್ದುದರಿಂದ ಇತ್ತೀಚೆಗಷ್ಟೇ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ.

*ನನ್ನ ಮಗನಿಗೆ ಯಾವುದೇಸಂಘಟನೆಯೊಂದಿಗೆ ನಂಟಿಲ್ಲ: ಮಾಹಿರಾ ಖಾತೂನ್

ನನ್ನ ಮಗನಿಗೆ ಯಾವುದೇ ಉಗ್ರ ಸಂಘಟನೆಯೊಂದಿಗೆ ನಂಟಿಲ್ಲ. ಆತ ಅಮಾಯಕ. ಇತ್ತೀಚೆಗಷ್ಟೇ ಪರೀಕ್ಷೆ ಮುಗಿಸಿ ಉದ್ಯೋಗಕ್ಕಾಗಿ ಅಲೆದಾಟ ನಡೆಸುತ್ತಿದ್ದ ಎಂದು ರಾಷ್ಟ್ರೀಯ ತನಿಖಾ ತಂಡದಿಂದ ವಶಕ್ಕೊಳಗಾಗಿರುವ ನಜ್ಮುಲ್ ಹುದಾ ಎಂಬಾತನ ತಾಯಿ ಮಾಹಿರಾ ಖಾತೂನ್ ಪ್ರತಿಕ್ರಿಯಿಸಿದ್ದಾರೆ.

ಇಂದು ಬೆಳಗ್ಗಿನ ಜಾವ ಸುಮಾರು 2:30ಕ್ಕೆ ಹಠಾತ್ತಾಗಿ ಮನೆಯ ಪ್ರವೇಶ ದ್ವಾರ ತಟ್ಟುವ ಶಬ್ದ ಬಂತು. ಮೊದಲಿಗೆ ನಾವು ಬಾಗಿಲು ತೆರೆಯಲು ಹಿಂಜರಿದೆವು.

ಕಿಟಕಿಯನ್ನು ಸ್ವಲ್ಪ ತೆರೆದು ನೋಡಿದಾಗ ಸುಮಾರು 100 ಮಂದಿಯಷ್ಟು ಪೊಲೀಸರಿದ್ದರು.ನಾವು ಭಯ ಭೀತರಾಗಿದ್ದೆವು.ಅಷ್ಟು ಹೊತ್ತಿಗೆ ಹೊರಗಿನ ಕರೆಂಟ್ ಫೀಸ್‌ನ್ನು ತೆಗೆದು ಕತ್ತಲೆ ಮಾಡಲಾಗಿತ್ತು. ಹೊರಗಿನಿಂದ ಮೂರ್ನಾಲು ಟಾರ್ಚ್ ಲೈಟ್‌ಗಳ ಮೂಲಕ ಮನೆಯೊಳಗೆ ಬೆಳಕು ಹಾಯಿಸಿದರು. ನಾವು ಇನ್ನಷ್ಟು ಹೆದರಿದೆವು. ಅನಂತರ ಹೊರಗಿದ್ದ ಪೊಲೀಸರು ಬಾಗಿಲು ಬಡಿಯುತ್ತಾ ಕನ್ನಡದಲ್ಲಿ, ‘ನಾವು ಪೊಲೀಸರು... ಬಾಗಿಲುತೆರೆಯಿರಿ...’ ಎಂದರು. ಭಯದಿಂದಲೇ ನಾವು ಬಾಗಿಲು ತೆರೆದೆವು.ಅವರು ಯಾಕೆ ಬಂದಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಾಗಲಿಲ್ಲ.ಒಳಗೆ ಬಂದವರು ಮನೆಯೊಳಗಿನ ಕೋಣೆಗಳನ್ನು ತಡಕಾಡಿದರು.ಅನಂತರಮನೆಯಲ್ಲಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್ಫೋನ್‌ನ್ನು ವಶಕ್ಕೆತೆಗೆದುಕೊಂಡು ಮನೆಯೊಳಗಿದ್ದ ತನ್ನ ಮಗ ನಜ್ಮುಲ್ ಹುದಾನನ್ನು ಕರೆದುಕೊಂಡು ಹೋಗಿದ್ದಾರೆ.

ಇಷ್ಟು ಮಾತ್ರ ನಮಗೆ ಗೊತ್ತು.ಅವನನ್ನು ಕರೆದುಕೊಂಡು ಹೋದ ಬಳಿಕ ನಮಗೆ ಇನ್ನಷ್ಟು ಆತಂಕವಾಯಿತು.ಬೆಳಗ್ಗೆ ಟಿವಿ ನೋಡಿದ ಬಳಿಕವೇ ತನ್ನ ಮಗನನ್ನು ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂಬುದು ತಿಳಿಯಿತು ಎಂದು ಮಾಹಿರಾ ಖಾತೂನ್ ಪೊಲೀಸರ ಕಾರ್ಯಾಚರಣೆಯ ಬಗ್ಗೆ ವಿವರಿಸುತ್ತಾರೆ.

ಬೆಂಗಳೂರಿನ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ ನನ್ನ ಮಗ ಕೆಮಿಕಲ್‌ ಎಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿದ್ದಾನೆ. ಈ ನಡುವೆಯೇ ನನ್ನ ಮಗ ಆಗಾಗ ಅನಾರೋಗ್ಯ ಹೊಂದುತ್ತಿದ್ದ. ಆ ಹಿನ್ನೆಲೆಯಲ್ಲಿ ಆತನ ಹಾಜರಾತಿಯೂ ಕಡಿಮೆ ಇತ್ತು. ಈ ಬಗ್ಗೆ ಆತ ತನ್ನ ಬಳಿ ಹೇಳಿಕೊಳ್ಳುತ್ತಿದ್ದ.

ಹಾಜರಾತಿ ಕಡಿಮೆಯಾಗಿದ್ದರಿಂದ ಆತನಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನಿರಾಕರಿಸಲಾಗಿತ್ತು.ಅನಂತರ ಕಳೆದ ವರ್ಷ ಆತ ಪರೀಕ್ಷೆ ಬರೆದಿದ್ದಾನೆ. ಇದೀಗ ಫಲಿತಾಂಶಕ್ಕಾಗಿ ಕಾಯುತ್ತಿದ್ದ. ತಾನು ಉತ್ತಮ ಉದ್ಯೋಗವನ್ನು ಪಡೆದು ಜೀವನದಲ್ಲಿ ನೆಲೆ ಕಾಣಬೇಕೆಂದು ಬಯಸಿದ್ದ. ಅದಕ್ಕಾಗಿ ಉದ್ಯೋಗವನ್ನು ಅರಸುತ್ತಿದ್ದ.ಅಂತರ್ಜಾಲದ ಮುಖಾಂತರ ಉದ್ಯೋಗವನ್ನು ಹುಡುಕುತ್ತಿದ್ದ ಎಂದುಅವರು ತಿಳಿಸಿದ್ದಾರೆ.

*ಮಗನಿಗೆ ಕೆಟ್ಟ ಸಹವಾಸ ಇರಲಿಲ್ಲ: ಸೈುಲ್ ಹುದಾ

ನನ್ನ ಮಗ ಕೆಟ್ಟಹುಡುಗರ ಸಹವಾಸ ಹೊಂದಿರಲಿಲ್ಲ.ಉದ್ಯೋಗದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದ. ಮತ್ತೆ ಅವನಷ್ಟಕ್ಕೇ ಅವನಿದ್ದ ಎಂದುಬಂತ ನಜ್ಮುಲ್ ಹುದಾ ಎಂಬವರ ತಂದೆ ಸೈುಲ್ ಹುದಾ ಹೇಳಿದ್ದಾರೆ.

ನನ್ನ ಮಗನಿಗೆ ಯಾವುದೇ ಉಗ್ರ ಸಂಘಟನೆಯೊಂದಿಗೆಸಂಪರ್ಕ ಕಲ್ಪಿಸಬೇಡಿ.ಅವನು ಅಮಾಯಕನಾಗಿದ್ದಾನೆ. ಅವನಿಗೆ ಯಾವುದೇ ಸಂಘಟನೆಯೊಂದಿಗೆ ಸಂಪರ್ಕ ಇಲ್ಲ. ಇತ್ತೀಚೆಗಷ್ಟೇ ಕೆಮಿಕಲ್ ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾನೆ. ಫಲಿತಾಂಶಕ್ಕಾಗಿಕಾಯುತ್ತಿದ್ದಾನೆ. ಇಂಟರ್ನೆಟ್, ಮೊಬೈಲ್ ಬಳಸುತ್ತಿದ್ದ.ಇಂಟರ್ನೆಟ್ ಮುಖಾಂತರ ಉದ್ಯೋಗ ಹುಡುಕುತ್ತಿದ್ದ ಎನ್ನುತ್ತಾರೆ ಸೈುಲ್ ಹುದಾ.

*‘‘ಗಳಗಳನೆ ಅತ್ತ ತಂದೆ’’

ಮಸೀದಿಯಲ್ಲಿ ಇಮಾಂ ಕೆಲಸ ಮಾಡುವ ಜೊತೆಗೆ ಸೈಕಲ್ ತುಳಿದು ಮನೆ ಮನೆಗೆ ತೆರಳಿ ಮಕ್ಕಳಿಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡುತ್ತಾ, ಬಂದ ಹಣದಿಂದ ಮಗನ ವಿದ್ಯಾಭ್ಯಾಸವನ್ನು ಮಾಡಿಸಿದೆ. ಆತನ ಬಗ್ಗೆ ಭವಿಷ್ಯದಲ್ಲಿ ಒಳ್ಳೆಯ ಕನಸನ್ನು ಕಂಡಿದ್ದೆ. ಆದರೆ... ಹೀಗಾಯಿತಲ್ಲಾ... ಎಂದು ಮಗನನ್ನು ಪೊಲೀಸರು ಕರೆದುಕೊಂಡು ಹೋದ ಬಳಿಕ ಮಗನನ್ನು ನೆನೆಯುತ್ತಾ ಸೈುಲ್ ಹುದಾಗಳಗಳನೆ ಅತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

*ಉತ್ತಮ ನಡತೆಯನ್ನು ಹೊಂದಿದ್ದ: ಪ್ರಾಂಶುಪಾಲ

ನಜ್ಮುಲ್ ಹುದಾ ಉತ್ತಮ ನಡತೆಯ ವಿದ್ಯಾರ್ಥಿ. ಶಿಕ್ಷಕರೊಂದಿಗೆ, ಕಾಲೇಜು ಡಿಪಾರ್ಟ್‌ಮೆಂಟ್‌ನವರೊಂದಿಗೆ ಒಳ್ಳೆಯ ರೀತಿಯಾಗಿಯೇ ವ್ಯವಹರಿಸುತ್ತಿದ್ದ.ಹಾಜರಾತಿ ಪುಸ್ತಕ ಗಮನಿಸಿದಾಗ ಆತನ ಹಾಜರಾತಿ ಕಡಿಮೆ ಇತ್ತು.ಇದನ್ನು ಹೊರತುಪಡಿಸಿದರೆ ಯಾರೊಂದಿಗೂ ಕೆಟ್ಟದಾಗಿ ವರ್ತಿಸಿದ ಬಗ್ಗೆ ದೂರು ಇಲ್ಲ ಎಂದು ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ಮಾಧ್ಯಮ ಪ್ರತಿನಿಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

*ಮೃದು ಸ್ವಭಾವಿ

ನಜ್ಮುಲ್ ಹುದಾ ಹಾಗೂ ಆತನ ಕುಟುಂಬ ಸುಮಾರು 30 ವರ್ಷಗಳಿಂದ ಪೆರ್ಮುದೆಯ ಬಟ್ರಕೆರೆಯಲ್ಲಿ ನೆಲೆಸಿದ್ದು, ಆ ದಿನಗಳಿಂದಲೂ ನನಗೆ ಅವರ ಬಗ್ಗೆಗೊತ್ತು. ನಜ್ಮುಲ್ ಹುದಾತುಂಬಾ ಮೃದು ಸ್ವಭಾವದ ಹುಡುಗ.ಆತ ಉಗ್ರ ಸಂಘಟನೆಗಳೊಂದಿಗೆ ಭಾಗಿಯಾಗಿರಲು ಸಾಧ್ಯವಿಲ್ಲ ಎಂದುಸ್ಥಳೀಯ ನಿವಾಸಿ ಅಬ್ದುಲ್ ಶೇಕ್ ಹೇಳುತ್ತಾರೆ.

*ಕಳೆದ 4 ದಿನಗಳ ಹಿಂದೆ ಪಾಸ್‌ಪೋರ್ಟ್‌ನ ವಿಚಾರಣೆಗಾಗಿ ಬಜ್ಪೆ ಠಾಣೆಗೆ ತೆರಳಿದ್ದ ನಜ್ಮುಲ್ ಹುದಾನಿಗೆ ಠಾಣೆಯ ಸಿಬ್ಬಂದಿಯೊಬ್ಬರು ಒರಟಾಗಿ ವರ್ತಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ. ಪಾಸ್‌ಪೋರ್ಟ್ ವಿಚಾರಣೆಗಾಗಿ ನಜ್ಮುಲ್ ಹುದಾ ಬಜ್ಪೆ ಪೊಲೀಸ್ ಠಾಣೆಗೆತೆರಳಿದಾಗ ಪೊಲೀಸ್ ಸಿಬ್ಬಂದಿಯೋರ್ವರು ಆತನನ್ನು ಉದ್ದೇಶಿಸಿ ‘‘ಗಡ್ಡ ಬಿಟ್ಟಿರುವ ನಿನಗೆ ಪಾಸ್‌ಪೋರ್ಟ್ ಸಿಗುವ ಸಾಧ್ಯತೆ ಇಲ್ಲ’’ ಎಂದು ಹಿಯಾಳಿಸಿರುವುದಾಗಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News