ನರ್ಸಿಂಗ್ ವಿದ್ಯಾರ್ಥಿನಿಯರಿಗೆೆ ಗ್ರಾಮೀಣಾಭಿವೃದ್ಧಿ ತರಬೇತಿ
Update: 2016-01-22 23:44 IST
ಮಣಿಪಾಲ,ಜ.22: ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿ ನಿಯರಿಗೆೆ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳನ್ನು ಪರಿಚಯಿಸುವ ತರಬೇತಿ ಶಿಬಿರ ಶಿವಳ್ಳಿಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಇತ್ತೀಚೆಗೆ ನಡೆಯಿತು. ಮಾಹಿತಿ ಶಿಬಿರವನ್ನು ಖ್ಯಾತ ವೈದ್ಯೆ ಮಣಿಪಾಲ ಸೋನಿಯ ಕ್ಲಿನಿಕ್‌ನ ಡಾ.ಗೌರಿ ಉದ್ಘಾಟಿಸಿದರು. ಬಿವಿಟಿಯ ಐ.ಜಿ.ಕಿಣಿ ಮಾತನಾಡಿದರು. ಬಿವಿಟಿಯ ಟ್ರಸ್ಟಿ ಎ.ಲಕ್ಷ್ಮೀಬಾಯಿ ಸ್ವಾಗತಿಸಿದರು. ಪ್ರೊ. ಭಾರತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.