ರೋಗಿಗಳಿಗೆ ಹಣ್ಣುಹಂಪಲು ವಿತರಣೆ
ಪುತ್ತೂರು, ಜ.22: ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬೀಟಿಗೆಯ ಸಿದ್ದಿಕ್ ಪುತ್ತೂರಿನ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ತಮ್ಮ ಮದುವೆಯ ಸಂತಸವನ್ನು ಹಂಚಿಕೊಂಡರು. ಈ ಸಂದರ್ಭ ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ಶರಫುದ್ದೀನ್ ತಂಙಳ್ ಸಾಲ್ಮರ, ಬೀಟಿಗೆ ಮಸೀದಿಯ ಕಾರ್ಯದರ್ಶಿ ಇಬ್ರಾಹೀಂ ಕಡವ, ಕೋಶಾಧಿಕಾರಿ ಅಝೀಝ್ ಬೀಟಿಗೆ, ಎಸ್ಕೆಎಸ್ಸೆಸ್ಸೆಫ್ ಕಲ್ಲೇಗ ಶಾಖಾಧ್ಯಕ್ಷ ಹನೀಫ್ ಕಲ್ಲೇಗ, ಎಸ್‌ಡಿಪಿಐ ನಗರ ಅಧ್ಯಕ್ಷ ಅಶ್ರಫ್ ಬಾವು, ಮುರ ಮಿಸ್ಬಾಹುಲ್ ಹುದಾ ಯಂಗ್‌ಮೆನ್ಸ್ ಉಪಾಧ್ಯಕ್ಷ ರಶೀದ್ ಮುರ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಹಂಝ ಅಫ್ನಾನ್, ಪುತ್ತೂರು ಸಿಟಿ ಫ್ರೆಂಡ್ಸ್ ಅಧ್ಯಕ್ಷ ರಝಾಕ್ ಬಪ್ಪಳಿಗೆ, ಕಾರ್ಯದರ್ಶಿ ಇಬ್ರಾಹೀಂ ಬಪ್ಪಳಿಗೆ, ಇಬ್ರಾಹೀಂ ಜೆ.ಬಿ., ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಅಧ್ಯಕ್ಷ ಇಕ್ಬಾಲ್ ಯು.ಕೆ., ಸರಕಾರಿ ಆಸ್ಪತ್ರೆಯ ವೈದ್ಯ ಪ್ರದೀಪ್ ಉಪಸ್ಥಿತರಿದ್ದರು.