×
Ad

ಕಾರಾಜೆ: ಮದ್ರಸ ಕಟ್ಟಡ ಉದ್ಘಾಟನೆ

Update: 2016-01-22 23:55 IST

ವಿಟ್ಲ, ಜ.22: ಕಾರಾಜೆ ನೂರುಲ್ ಹುದಾ ಜುಮಾ ಮಸೀದಿ ಅಧೀನದಲ್ಲಿರುವ ಸಿರಾಜುಲ್ ಹುದಾ ಮದ್ರಸ, ನಾನಿಲಕೋಡಿ-ಕಾರಾಜೆ ಇದರ ನೂತನ ಕಟ್ಟಡದ ಉದ್ಘಾಟನೆ ಹಾಗೂ ಮದ್ರಸ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮವು ರವಿವಾರ ನಡೆಯಿತು. ಸೈಯದ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ನೂತನ ಮದ್ರಸ ಕಟ್ಟಡವನ್ನು ಉದ್ಘಾಟಿಸಿ, ದುವಾಶೀರ್ವಚನಗೈದರು. ಮಸೀದಿ ಅಧ್ಯಕ್ಷ ಕೆ. ಶೇಖಬ್ಬ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಮಸೀದಿ ಖತೀಬ್ ಯೂಸುಫ್ ಮದನಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್.ಎ. ಅಬ್ದುರ್ರಹ್ಮಾನ್ ಮದನಿ ಜೆಪ್ಪು ಮುಖ್ಯ ಭಾಷಣಗೈದರು. ಮುತ್ತಲಿಬ್ ಹಾಜಿ ನಾರ್ಶ, ಸತ್ತಾರ್ ಹಾಜಿ ಕಾರಾಜೆ, ಅಬ್ದುಲ್ ಜಲೀಲ್ ಕಾರಾಜೆ, ಫಾರೂಕ್ ಕಾರಾಜೆ, ಕೆ. ಇಬ್ರಾಹಿಂ ಪಡ್ಪು, ಮುಹಮ್ಮದ್ ಮೈಡಿಯರ್, ಮುಹಮ್ಮದ್ ಹನೀಫ್ ಕಾರಾಜೆ, ಅಬ್ದುಲ್ ಖಾದರ್ ಕಾರಾಜೆ, ಮುಹಮ್ಮದ್ ಕಾರಾಜೆ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News