×
Ad

ದತ್ತಪೀಠದಲ್ಲಿ ಪೊಲೀಸರೊಂದಿಗೆ ಗಲಾಟೆ: ಬೆಳ್ತಂಗಡಿಯ ನಾಲ್ವರ ಬಂಧನ

Update: 2016-01-23 13:05 IST

ಬೆಳ್ತಂಗಡಿ: ದತ್ತಪೀಠದಲ್ಲಿ ನಡೆದ ದತ್ತಮಾಲಾ ಸಂದರ್ಭದಲ್ಲಿ ಪೊಲೀಸರೊಂದಿಗೆ ಗಲಾಟೆಗೆ ಇಳಿದಿದ್ದ ಬೆಳ್ತಂಗಡಿಯ ನಾಲ್ವರು ಭಜರಂಗ ದಳದ ಕಾರ್ಯಕರ್ತರನ್ನು ಚಿಕ್ಕಮಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಇಲಂತಿಲ ನಿವಾಸಿಗಳಾದ ಶ್ರೀಕಾಂತ ಶೆಟ್ಟಿ ಹಾಗೂ ಶ್ಯಾಮ, ಚಾರ್ಮಾಡಿ ನಿವಾಸಿ ಶ್ರೀನಿವಾಸ ಹಾಗೂ ಸಂತೋಷ ಎಂಬವರಾಗಿದ್ದಾರೆ.

ದತ್ತಮಾಲಾ ಸಂದರ್ಭದಲ್ಲಿ ದತ್ತಪೀಠಕ್ಕೆ ತೆರಳಿದ್ದ ಇವರು ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ವಾಗ್ವಾದ ಗಲಾಟೆ ಮಾಡಿ ಅಲ್ಲಿಂದ ಊರಿಗೆ ಮರಳಿದ್ದರು ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಇವರ ಗುರುತು ಹಿಡಿದ ಪೊಲೀಸರು ಶನಿವಾರ ಬೆಳಿಗ್ಗೆ ಇವರ ಮನೆಗಳಿಗೆ ಧಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಕೆಲವರ ವಿರುದ್ದ ಈಗಾಗಲೆ ಸ್ಥಳೀಯ ಠಾಣೆಗಳಲ್ಲಿಯೂ ಪ್ರಕರಣಗಳಿವೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News