×
Ad

ಮೂಡುಬಿದಿರೆ : 14ನೆ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ

Update: 2016-01-23 13:35 IST

ಮೂಡುಬಿದಿರೆ : 14ನೆ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಗ್ಗೆ ಅಲಂಗಾರು ಮಹಾಲಿಂಗೆಶ್ವರ ದೇವಸ್ಥಾನದ ಅಡಳಿತ ಮೊಕ್ತೇಸರ ಈಶ್ವರ ಭಟ್,  ಧರ್ಮ ಗುರು ಬೆಸಿಲ್ ವಾಸ್ ಹಾಗೂ ಪುತ್ತಿಗೆ ಇ.ಎಂ.ಶಾಫಿ ಕುಂಬಳದ ಕರೆಯಲ್ಲಿ ದೀಪ ಬೆಳಗಿಸಿ,  ಕರೆಗೆ ಪ್ರಸಾದ ಹಾಕಿ ಉದ್ಘಾಟಿಸಿದರು.  

ಕಂಬಳ ಸಮಿತಿಯ ಅಧ್ಯಕ್ಷ,ಸಚಿವ ಕೆ.ಅಭಯಚಂದ್ರ ಜ್ಯೆನ್,  ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೆವಾಡಿಗ,  ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ , ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಸಮಿತಿಯ ಕುಲದೀಪ, ಸುರೇಶ್ ಪ್ರಭು ಹಾಗೂ ವಿವಿಧ ಸಂಸ್ಥೆಯ ಅ‍ಧ್ಯಕ್ಷರುಗಳು ಮತ್ತಿತರರು ಉಪಸ್ಥಿತರಿರದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News