ವರದಕ್ಷಿಣೆ; ಹಣ ಒಟ್ಟುಗೂಡಿಸಲಾಗದ ತಂದೆಯ ಕಷ್ಟ ನೋಡಿ ವಿಧ್ಯಾರ್ಥಿನಿ ನೇಣಿಗೆ ಶರಣು
ಲಾತೂರ್: ತನ್ನ ಮದುವೆಗಾಗಿ ವರದಕ್ಷಿಣೆ ಸಂಗ್ರಹಿಸಲು ತಂದೆ ಕಷ್ಟಪಡುತ್ತಿರುವುದನ್ನು ಕಂಡ ಹದಿನೆಂಟು ವರ್ಷದ ಯುವತಿ ನೇಣು ಹಾಕಿಕೊಂಡು ಆತ್ಮಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದಿದ್ದ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನುಮೋಹಿನಿ ಬಿಸ್ವಾಸ್ ಎಂದು ಗುರುತಿಸಲಾಗಿದೆ.
ಅಲ್ಲಿನ ಯುವಕನೋರ್ವನೊಂದಿಗೆ ಯುವತಿಯ ವಿವಾಹವನ್ನು ನಿಶ್ಚಯಿಸಲಾಗಿತ್ತು. ಆದರೆ ಗಂಡಿನ ಮನೆಯವರು ಕೇಳಿದ್ದ ವರದಕ್ಷಿಣೆಯನ್ನು ನೀಡಲು ರೈತನಾಗಿದ್ದ ತಂದೆಯಿಂದ ಸಾಧ್ಯವಾಗಿರಲಿಲ್ಲ. ವರದಕ್ಷಿಣೆಗಾಗಿ ಹಣ ಹೊಂದಿಸಿಕೊಳ್ಳಲು ತಂದೆ ಪಡುತ್ತಿರುವ ಕಷ್ಟವನ್ನು ಕಣ್ಣಾರೆ ಕಂಡ ಮೋಹಿನಿ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ನಡೆಸಿಕೊಂಡಳೆಂದು ಹೇಳಲಾಗಿದೆ.
ವರದಕ್ಷಿಣೆ ಸಾಮಾಜಿಕ ವಿಪತ್ತಾಗಿದ್ದು ಅದನ್ನುಸಮಾಜದಿಂದ ಕಿತ್ತೆಸೆಯಬೇಕೆಂದು ಮೋಹಿನಿ ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ. ಹನ್ನೆರಡನೆ ಕ್ಲಾಸ್‌ನಲ್ಲಿಶೇ. 80ರಷ್ಟು ಅಂಕ ಗಳಿಸಿದ್ದ ಈ ಪ್ರತಿಭಾವಂತೆ ವಿದ್ಯಾಭ್ಯಾಸ ಮುಂದುವರಿಸಲು ತಂದೆಯ ಕೈಯಲ್ಲಿ ಹಣವಿಲ್ಲದಿರುವು ಅಡ್ಡಿಯಾಗಿ ಪರಿಣಮಿಸಿತ್ತು . ಅವಳು ಶಿಕ್ಷಣವನ್ನು ಅನಿವಾರ್ಯವಾಗಿ ಅರ್ಧಕ್ಕೆ ನಿಲ್ಲಿಸಬೇಕಾಯಿತು.ಆದುದರಿಂದ ತಾನು ಅವಳಿಗೆ ಮದುವೆ ಮಾಡಿಸುವ ತೀರ್ಮಾನ ತೆಗೆದುಕೊಂಡೆ ಎಂದು ಮೋಹಿನಿಯ ತಂದೆ ಹೇಳಿಕೊಂಡಿದ್ದಾರೆ.