ಮೂಡುಬಿದಿರೆ : ವಿಜಯ ಕಾಂಚನ್‌ಗೆ ಚಿನ್ನದ ಪದಕ
Update: 2016-01-23 17:47 IST
ಮೂಡಬಿದಿರೆ: ಜಾರ್ಖಂಡ್ ಜಮ್ಸಡ್‌ಪುರಂನಲ್ಲಿ ಇತ್ತೀಚೆಗೆ ಜರುಗಿದ ರಾಷ್ಟ್ರಮಟ್ಟದ ಬೆಂಚ್‌ಪ್ರೆಸ್ ಚಾಂಪಿಯನ್ ಶಿಫ್ ನಲ್ಲಿ ವಿಜಯ ಕಾಂಚನ್ ಬೈಕಂಪ್ಪಾಡಿ ಅವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ 1 ಚಿನ್ನ ಮತ್ತು 1 ಕಂಚಿನ ಪದಕವನ್ನು ಗಳಿಸಿದ್ದಾರೆ. ಇವರು ಮೂಡುಬಿದಿರೆಯ ಪೊಲೀಸ್ ಠಾಣೆಯ ಸಿಬ್ಬಂದಿ ಯಾಗಿದ್ದು ಈಗಾಗಲೇ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿದ್ದಾರೆ.