ಕಾರ್ಕಳ : ಇಬ್ಬರು ಮಹಿಳೆಯರಿಗೆ ಅತ್ಯಾಚಾರ :- ಆರೋಪಿ ಸೆರೆ
Update: 2016-01-23 20:36 IST
ಕಾರ್ಕಳ : ಇಬ್ಬರು ಮಹಿಳೆಯರನ್ನು ಅತ್ಯಚಾರ ಎಸಗಿದ ಆರೋಪಿಯನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಸಿದ್ದಾರೆ. ಕೇರಳದ ಕೋಟಾಯಂ ಜಿಲ್ಲೆಯ ತುರ್ತಿಕೆರಯ ನಿವಾಸಿ. ಟಿ.ಕೆ.ಬಿಜು ಥೋಮಸ್ (46) ಆರೋಪಿ. ಆತ ಹಿರ್ಗಾನ ಗ್ರಾಮದ ಇಬ್ಬರು ಮಹಿಳೆಯರನ್ನು ಕಳೆದ 2012ರಿಂದ ನಿರಂತರವಾಗಿ ತನ್ನ ರಬ್ಬರ್ ತೋಟಕ್ಕೆ ಕೊಂಡೊಯ್ದು ಅತ್ಯಚಾರ ಎಸಗಿದ್ದ ಎಂದು ಇಬ್ಬರು ಮಹಿಳೆಯರು ದೂರಿನಲ್ಲಿ ವಿವರಿಸಿದ್ದಾರೆ. ಮಹಿಳೆಯರನ್ನು ಇದೀಗ ವೆ‘ದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಆರೋಪಿ ಬಿಜು ಥೋಮಸ್ ಈ ಹಿಂದೆ ಅಮೋನಿಯಂ ನೆ‘ಟ್ರೇಟ್ ದಾಸ್ತಾನುಗಾರರಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಇತ್ತೀಚೆಗೆಯಷ್ಟೇ ಬಿಡುಗಡೆಗೊಂಡಿದ್ದ ಈ ಆರೋಪಿ, ಇದೀಗ ಅತ್ಯಚಾರ ಪ್ರಕರಣದಲ್ಲಿ ಸಿಲುಕಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.