ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಗೆ ೭.೩೦ ಕೋಟಿ ರೂ . ಗಳ ಚೆಕ್ ಹಸ್ತಾಂತರ
ಕಾಸರಗೋಡು : ನೆನಗುದಿಗೆ ಬಿದ್ದಿದ್ದ ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಜನವರಿ ೨೮ ರಂದು ಆರಂಭಗೊಳ್ಳಲಿದೆ. ಕಾಮಗಾರಿಗೆ ಅಗತ್ಯವಾದ ಪ್ರಥಮ ಹಂತದ ಲ್ಲಿ ೭.೩೦ ಕೋಟಿ ರೂ . ಗಳ ಚೆಕ್ ನ್ನು ಜಿಲ್ಲಾಧಿಕಾರಿ ಪಿ, ಎಸ್ ಮುಹಮ್ಮದ್ ಸಗೀರ್ ರವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಮಗಾರಿಯ ಉಸ್ತುವಾರಿ ಹೊಂದಿರುವ ಕಿಟ್ಕೋ ಎಂಜಿನೀಯರ್ ಉಣ್ಣಿ ರವರಿಗೆ ಹಸ್ತಾಂತರಿಸಿದರು.
ಮೊದಲ ಹಂತದಲ್ಲಿ ಅಕಾಡಮಿಕ್ ಬ್ಲಾಕ್ ನ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕಾಮಗಾರಿಗೆ ಅಗತ್ಯವಾದ ಸಹಾಯ ನೀಡುವಂತೆ ವಿದ್ಯುತ್ ಮತ್ತು ಜಲ ಇಲಾಖೆಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.
ಸಭೆಯಲ್ಲಿ ಕಾಸರಗೋಡು ಶಾಸಕ ಎನ್ . ಎ ನೆಲ್ಲಿಕುನ್ನು , ಹೆಚ್ಚುವರಿ ದಂಡಾಧಿಕಾರಿ ಹೆಚ್. ದಿನೇಶನ್, ವೈದ್ಯಕೀಯ ಕಾಲೇಜು ಸಾಮಾಜಿಕ ಅಧಿಕಾರಿ ಡಾ. ಪಿ. ಜಿ . ಆರ್ ಪಿಳ್ಳೆ, ಉಪ ವೈದ್ಯಾಧಿಕಾರಿ ಡಾ. ಎಂ . ಸಿ ವಿಮಲ್ ರಾಜ್, ಹಣಕಾಸು ಅಧಿಕಾರಿ ಕೆ . ಕುನ್ಚಂಬು ನಾಯರ್ , ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಇ. ಪಿ ರಾಜ್ ಮೋಹನ್ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ವೈದ್ಯಕೀಯ ಕಾಲೇಜಿನ ನಿರ್ಮಾಣ ಕಾಮಗಾರಿಯ ಸರಕಾರ ಸಂಸ್ಥೆ ಕಿಟ್ಕೋ ಜವಾಬ್ದಾರಿ ವಹಿಸಲಾಗಿದೆ.
೬೦ ಎಕರೆ ಸ್ಥಳ ಇದಕ್ಕಾಗಿ ಮೀಸಲಿಡಲಾಗಿದೆ.
ಕಿಟ್ಕೋ ತಯಾರಿಸಿದ ಯೋಜನೆಯ ರೂಪು ರೇಖೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಹಾಸ್ಟೆಲ್ ಬ್ಲಾಕ್ , ಅಕಾಡಮಿಕ್ ಬ್ಲಾಕ್ , ಹಾಸ್ಟೆಲ್ , ಕ್ವಾಟರ್ಸ್, ಸಭಾಂಗಣ , ನೀರಿನ ಟ್ಯಾಂಕ್ ಮೊದಲಾದ ಯೋಜನೆಗಳು ಮೊದಲ ಹಂತದಲ್ಲಿ ಪೂರ್ಣಗೊಳಿಸಲಾಗುವುದು. ಯೋಜನೆಗೆ ನಬಾರ್ಡ್ ನ ಆರ್ಥಿಕ ಸಹಾಯ ಲಭಿಸಿದೆ. ೩೮೫ ಕೋಟಿ ರೂ . ಗಳ ವಚ್ಚ ಅಂದಾಜಿಸಲಾಗಿದ್ದು , ೨೮೮ ಕೋಟಿ ರೂ . ಗಳ ಆಡಳಿತಾನುಮತಿ ಲಭಿಸಿದೆ.
ಪ್ರಥಮ ಹಂತದಲ್ಲಿ ೩೦೦ ಹಾಸಿಗೆ ಗಳ ಆಸ್ಪತ್ರೆ ನಿರ್ಮಿಸಲಾಗುವುದು. ಬಳಿಕ ೫೦೦ ಹಾಸಿಗೆ ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.