ಕಾಸರಗೋಡು : ಕುಂಬಳೆ ಯಲ್ಲಿ ಕ್ಷೇತ್ರ ಉತ್ಸವದ ಸಂದರ್ಭದಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ - ಆರು ಮಂದಿಯ ಬಂಧಿನ
Update: 2016-01-23 21:42 IST
ಕಾಸರಗೋಡು : ಕುಂಬಳೆ ಯಲ್ಲಿ ಕ್ಷೇತ್ರ ಉತ್ಸವದ ಸಂದರ್ಭದಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಮೂಲದ ಆರು ಮಂದಿ ಯುವಕರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಬ್ದುಲ್ ಖಾದರ್ ಯಾನೆ ಸಲ್ಮಾನ್ , ಮಜೀದ್ , ಶಾನ್ ವಾಜ್ , ನದೀಂ, ಮುಹಮ್ಮದ್ ರಹೀಬ್, ಪರ್ವೇಜ್ ಎಂದು ಗುರುತಿಸಲಾಗಿದೆ.
ಇವರು ಕಾಸರಗೋಡು ಸುತ್ತಮುತ್ತ ವಸ್ತ್ರ ಮಾರಾಟ ಮಾಡುತ್ತಿದ್ದರು. ಜನವರಿ ೧೭ ರಂದು ರಾತ್ರಿ ಕುಂಬಳೆ ಸರಕಾರೀ ಹೈಸ್ಕೂಲ್ ಮೈದಾನ ಬಳಿ ಕುಂಬಳೆ ಕಳತ್ತೂರು ಕಾರಿಂಜೆಯ ಜಯಸೂರ್ಯ ಮತ್ತು ಸ್ನೇಹಿತ ಜಗದೀಶ್ ( ೨೭) ಮೇಲೆ ಹಲ್ಲೆ ನಡೆಸಿದ್ದರು.
ಮಹಿಳೆಯರ ಭಾವಚಿತ್ರ ಮೊಬೈಲ್ ನಲ್ಲಿ ಕ್ಲಿಕ್ಕಿಸುತ್ತಿದ್ದಾಗ ಪ್ರಶ್ನಿಸಿದ್ದಕ್ಕಾಗಿ ತಂಡವು ಹಲ್ಲೆ ನಡೆಸಿತ್ತು. ಕುಂಬಳೆ ಯ ವಸತಿ ಗ್ರಹ ದಿಂದ ಇವರನ್ನು ಬಂಧಿಸಲಾಯಿತು.