ರೈಲಿನಲ್ಲಿ ದಂಪತಿಗೆ ಕಿರುಕುಳ ನೀಡಿದ್ದ ಜೆಡಿಯು ಶಾಸಕ ವಜಾ
Update: 2016-01-23 23:29 IST
ಪಾಟ್ನಾ,ಜ.23: ಗುವಾಹಟಿ-ಹೊಸದಿಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಕಿರುಕುಳವನ್ನು ನೀಡಿದ ಆರೋಪವನ್ನು ಎದುರಿಸುತ್ತಿರುವ ಪಕ್ಷದ ಶಾಸಕ ಸರ್ಫರಾಝ್ ಆಲಂ ಅವರನ್ನು ಜೆಡಿಯು ಶನಿವಾರ ಪಕ್ಷದಿಂದ ಅಮಾನುತುಗೊಳಿಸಿದೆ.
ಪ್ರಾಥಮಿಕ ಸಾಕ್ಷಾಧಾರದ ಆಧಾರದಲ್ಲಿ ಆಲಂ ತಪ್ಪೆಸಗಿದ್ದಾರೆ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ಎಂದು ಜೆಡಿಯು ನಾಯಕ ವಶಿಷ್ಠ ನಾರಾಯಣ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಆರ್‌ಜೆಡಿ ಸಂಸದ ಮುಹಮ್ಮದ್ ತಸ್ಲಿಮುದ್ದೀನ್‌ರ ಪುತ್ರ ಆಲಂ ಅರಾರಿಯಾ ಜಿಲ್ಲೆಯ ಜೋಕಿಹಾಟ್‌ನಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿಯ ರೈಲ್ವೆ ಪೊಲೀಸರು ಸೋಮವಾರ ಆಲಂ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು.