ಇಪಿಡಬ್ಲೂ ವಾರಪತ್ರಿಕೆ ಸಂಪಾದಕರಾಗಿ ಪರಂಜೋಯ್ ನೇಮಕ
Update: 2016-01-23 23:30 IST
ಹೊಸದಿಲ್ಲಿ,ಜ.23: ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಪರಂ ಜೋಯ್ ಗುಹಾ ತಾಕುರ್ಥರನ್ನು ಎಕಾನಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ(ಇಪಿಡಬ್ಲೂ) ವಾರಪತ್ರಿಕೆಗೆ ಸಂಪಾದಕರನ್ನಾಗಿ ನೇಮಕ ಮಾಡಲಾಗಿದೆ. 60 ವರ್ಷ ವಯಸ್ಸಿನ ತಾಕುರ್ಥ ಮುಂದಿನ ಎಪ್ರಿಲ್‌ನಲ್ಲಿ ಅಧಿಕಾರ ವಹಿಸಿ ಕೊಳ್ಳಲಿದ್ದಾರೆ. 11 ವರ್ಷಗಳ ಕಾಲ ಸಂಪಾದಕರಾಗಿದ್ದ ರಾಮ್ ಮನೋಹರ್ ರೆಡ್ಡಿ ಮಾರ್ಚ್ ಅಂತ್ಯದಲ್ಲಿ ಹುದ್ದೆ ತೊರೆಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ತಾಕುರ್ಥರನ್ನು ಈ ಉನ್ನತ ಹುದ್ದೆಗೆ ನೇಮಿಸಲಾಗಿದೆ ಎಂದು ಸಮೀಕ್ಷಾ ಟ್ರಸ್ಟ್ ಮಾಹಿತಿ ನೀಡಿದೆ.