×
Ad

ಪಥಸಂಚಲನದಲ್ಲಿ ಸಾನಿಧ್ಯ ವಸತಿ ಶಾಲೆ ಪ್ರಥಮ

Update: 2016-01-23 23:34 IST


ಮಂಗಳೂರು,ಜ.23: ಜೆಎಸ್ಸೆಸ್ಸ್ ಮಹಾವಿದ್ಯಾಪೀಠಸುತ್ತೂರು, ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡಮಿ ಫಾರ್ ಡಿಫರೆಂಟಲಿ ಏಬಲ್ಡ್ ಹಾಗೂ ರೋಟರಿ ಮಿಡ್‌ಟೌನ್ ಮೈಸೂರು ಇವುಗಳ ಆಶ್ರಯದಲ್ಲಿ ಇತ್ತೀಚೆಗೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಕ್ಷೇತ್ರದಲ್ಲಿ ಜರಗಿದ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯ ತಂಡ ಉದ್ಘಾಟನಾ ಸಮಾರಂಭದ ಸಂದರ್ಭ ನಡೆದ ಪಥಸಂಚಲನದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಈಕ್ರೀಡಾಕೂಟದಲ್ಲಿ ದೈಹಿಕವಾಗಿ ಹೆಚ್ಚು ಸಾಮರ್ಥ್ಯದ ಕ್ರೀಡಾ ಪಟುಗಳಿಗಾಗಿ ಮತ್ತು ಕಡಿಮೆ ಸಾಮರ್ಥ್ಯದ ಕ್ರೀಡಾಪಟುಗಳಿಗಾಗಿ ಪ್ರತ್ಯೇಕವಾದ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಕಡಿಮೆ ದೈಹಿಕ ಸಾಮರ್ಥ್ಯವುಳ್ಳವರಿಗಾಗಿ 50ಮೀ. ಓಟ, ಚೆಂಡೆಸೆತ ಸ್ಪರ್ಧೆಗಳು ನಡೆದಿದ್ದು, ಈ ವಿಭಾಗದಲ್ಲಿ ಸಾನಿಧ್ಯ ಸಂಸ್ಥೆ 6 ಚಿನ್ನ, 8ಬೆಳ್ಳಿ, 8ಕಂಚಿನ ಪದಕಗಳೊಂದಿಗೆ 62ಅಂಕಗಳಿಂದ ದ್ವಿತೀಯ ಸ್ಥಾನವನ್ನು ತನ್ನದಾಗಿಕೊಂಡಿತು.ಹೆಚ್ಚು ಸಾಮರ್ಥ್ಯವುಳ್ಳವರಿಗಾಗಿ 100ಮೀ, 200ಮೀ, ರಿಲೇ ಪಂದ್ಯಾಟವು ನಡೆದಿದ್ದು ಈ ವಿಭಾಗದಲ್ಲಿ ಸಾನಿಧ್ಯ ತಂಡ 4ಚಿನ್ನ, 8ಬೆಳ್ಳಿ ಹಾಗೂ 7ಕಂಚಿನ ಪದಕಗಳನ್ನು ಗಳಿಸಿ ಕೊಂಡಿತು ಸಂಸ್ಥೆಯಿಂದ ಒಟ್ಟು 34 ಮಾನಸಿಕ ಭಿನ್ನ ಸಾಮರ್ಥ್ಯದ ಕ್ರೀಡಾಪಟುಗಳು ಹಾಗೂ 12 ಮಂದಿ ವಿಶೇಷ ಶಿಕ್ಷಕಿಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News