×
Ad

ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ

Update: 2016-01-23 23:41 IST


ಮಂಗಳೂರು, ಜ.23: ಕರಾವಳಿ ಕೊಂಕಣ್ಸ್ ತನ್ನ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಬೆಂದೂರಿನ ಸಂತ ಸೆಬಾಸ್ಟಿಯನ್ ಇಗರ್ಜಿಯ ವಠಾರದಲ್ಲಿ ಆಯೋಜಿಸಿದ ‘ಕೊಂಕಣ್ ಕಲಾಶ್ರೀ’ ಬಿರುದಾಂಕಿತ ಕ್ಲೊಡ್ ಡಿ’ಸೋಜರ 50ನೆ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರದರ್ಶನಗೊಂಡಿತು. ಸಂಗೀತ ಪ್ರದರ್ಶನದ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಂತೀಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಬೆಂದೂರ್ ಚರ್ಚ್‌ನ ಧರ್ಮಗುರು ವಂ.ಆ್ಯಂಟನಿ ಸೆರಾವೊ, ಸಹಾಯಕ ಧರ್ಮಗುರು ವಂ.ಜೇಸನ್ ಲೋಬೊ, ವಂ.ಅಶ್ವಿನ್ ಕಾರ್ಡೋಜ, ಪದ್ವಾ ಕಾಲೇಜಿನ ಪ್ರಾಂಶುಪಾಲ ವಂ ಆಲ್ವಿನ್ ಸೆರಾವೊ, ಸಂಗೀತ ಕಾರ್ಯಕ್ರಮದ ಪ್ರಧಾನ ಪೋಷಕ ಎರಲ್ ಸಾಮ್ಯುವೆಲ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿನ್ಸೆಂಟ್ ಗೋವಿಯಸ್, ಕಾರ್ಯದರ್ಶಿ ರೊನಾಲ್ಡ್ ವಾಲ್ಟರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಕ್ಲೊಡ್ ಡಿ’ಸೋಜ, ಸಂಗೀತ ನಿರ್ದೇಶಕ ಜೊಸ್ವಿನ್ ಪಿಂಟೊ, ಸಮಾಜ ಸೇವಕಿ ಕೊರಿನ್ ರಸ್ಕಿನ್ಹಾ, ಸಂಗೀತ ಶಿಕ್ಷಕ ಚಾರ್ಲ್ಸ್ ಡಿ’ಸೋಜರನ್ನು ಸನ್ಮಾನಿಸಲಾಯಿತು. ರೊನಾಲ್ಡ್ ವಾಲ್ಟರ್ ಸ್ವಾಗತಿಸಿದರು. ಸುಜಿತ್ ನೊರೊನ್ಹಾ ವಂದಿಸಿದರು. ಆಲ್ವಿನ್ ಡಿ,ಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News