ದೇಶದ ಅಭಿವೃದ್ದಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳ ಪ್ರಮುಖ ಪಾತ್ರ:ಪ್ರಭಾತ್ ಪಟ್ನಾಯಕ್
ಮಂಗಳೂರು: ದೇಶದ ಅಭಿವೃದ್ದಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸಿದೆ. ಬ್ಯಾಂಕುಗಳ ರಾಷ್ಟ್ರೀಕರಣವಾಗದೆ ಇದ್ದಿದ್ದರೆ ದೇಶದಲ್ಲಿ ಹಸಿರು ಕ್ರಾಂತಿ ಯಶಸ್ವಿಯಾಗಲು ಸಾಧ್ಯವಿರಲಿಲ್ಲ ಎಂದು ನವದೆಹಲಿ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಪೆಸರ್ ಪ್ರಭಾತ್ ಪಟ್ನಾಯಕ್ ಹೇಳಿದರು.
ನಗರದ ಟಿಎಂಎ ಪೈ ಸಭಾಭವನದಲ್ಲಿ ಆಯೋಜಿಸಲಾದ ಕಾರ್ಪೋರೇಶನ್ ಬ್ಯಾಂಕ್ ಅಸೋಸಿಯೇಶನ್(ಸಿಬಿಒಒ)ನ 20 ನೇ ರಾಷ್ಟ್ರೀಯ ಸಮ್ಮೇಳನ ಮತ್ತು ಸಾಮನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬ್ಯಾಂಕುಗಳ ರಾಷ್ಟೀಕರಣದಿಂದ ದೇಶದಲ್ಲಿ ಸಾಕಷ್ಟು ಆರ್ಥಿಕ ಅಭಿವೃದ್ದಿ ಕಂಡಿದೆ.ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಮಹತ್ವದ ಕೊಡುಗೆಯನ್ನು ಸಾರ್ವಜನಿಕ ರಂಗದ ಬ್ಯಾಂಕುಗಳು ನೀಡಿದೆ. ಜನಸಾಮಾನ್ಯರು ಬ್ಯಾಂಕು ರಾಷ್ಟ್ರೀಕರಣದಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಆದರೆ ಖಾಸಗಿ ಬ್ಯಾಂಕುಗಳಿಂದ ಜನಸಾಮನ್ಯರಿಗೆ ಹೆಚ್ಚಿನ ಪ್ರಯೋಜನವಿಲ್ಲ. ಖಾಸಗಿ ಬ್ಯಾಂಕುಗಳು ಬಡವರಿಗೆ, ಮೀನುಗಾರರಿಗೆ, ರೈತರಿಗೆ ಸಾಲಸೌಲಭ್ಯವನ್ನು ನೀಡದೆ ಕೇವಲ ಶ್ರೀಮಂತರಿಗೆ ಮಾತ್ರ ಸಾಲಸೌಲಭ್ಯ ನೀಡುತ್ತದೆ. ಸಾರ್ವಜನಿಕರ ರಂಗದ ಬ್ಯಾಂಕುಗಳು ಬಡವರ, ರೈತರ, ಬಗ್ಗೆ ಕಾಳಜಿಯನಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಐಬಿಒಸಿ ಅಧ್ಯಕ್ಷ ವೈ.ಸುದರ್ಶನ್ , ಸಿಬಿಒಒ ಉಪಾಧ್ಯಕ್ಷ ಜಿ.ರಘುರಾಮನ್, ಪ್ರ.ಕಾರ್ಯದರ್ಶಿ ಏಕನಾಥ ಬಾಳಿಗ, ಸ್ವಾಗತ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರಾವ್, ಕಾರ್ಯದರ್ಶಿ ಕೆ.ಎಸ್.ಕಾರ್ತಿಕ್ ಉಸಸ್ಥಿತರಿದ್ದರು.