×
Ad

ರಸ್ತೆ ಅಪಘಾತ: ಇಬ್ಬರಿಗೆ ಗಾಯ

Update: 2016-01-24 13:12 IST

ಕಾಸರಗೋಡು : ರಸ್ತೆ ದಾಮರೀಕರಣಕ್ಕೆ  ಜಲ್ಲಿ ಹುಡಿಯನ್ನು ರಸ್ತೆಯಲ್ಲೇ ಹಾಕಲಾಗಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಯ ಕುಂಬಳೆ ಶಿರಿಯ ಬಳಿ ಬೈಕ್ ಅಪಘಾತಕ್ಕಿಡಾಗಿ ಇಬ್ಬರು ಗಾಯಗೊಂಡಿದ್ದಾರೆ . ಜಲ್ಲಿ ಹುಡಿ ರಾಶಿ ಮೇಲೆ ಹತ್ತಿದ ಬೈಕ್ ಮಗುಚಿ ಬಿದ್ದು ಈ ದುರಂತ ಸಂಭವಿಸಿದೆ.
 ನೀರ್ಚಾಲ್ ನ ಯೋಗೀಶ್ ಮತ್ತು ಸತೀಶ್ ಗಾಯಗೊಂಡವರು.  ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು , ಜಲ್ಲಿ ಹುಡಿಯನ್ನು ಅಲ್ಲಲ್ಲಿ ರಸ್ತೆಯಲ್ಲೇ ಸುರಿದಿದ್ದು ,  ಈ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News