ಅವಿಭಜಿತ ದ.ಕ ಜಿಲ್ಲಾ ಮಟ್ಟದ ವಾಲಿಬಾಲ್, ಶಟ್ಲ್ ಪಂದ್ಯಾಟ
Update: 2016-01-24 13:18 IST
ಮೂಡುಬಿದಿರೆ: ಸಪಳಿಗರ ತಾನೇ ಗಾಣಿಗರ ಸೇವಾಸಂಘ (ರಿ) ಗಾಣಿಗರ ಯುವ ವೇದಿಕೆ ಮತ್ತು ಗಾಣಿಗರ ವೇದಿಕೆ ಮತ್ತು ಗಾಣಿಗರ ಮಹಿಳಾ ವೇದಿಕೆ ಮೂಡುಬಿದಿರೆ ಇವುಗಳ ಅಶ್ರಯದಲ್ಲಿ ಅವಿಭಜಿತ ದ.ಕ ಜಿಲ್ಲಾ ಮಟ್ಟದ ವಾಲಿಬಾಲ್, ಶಟ್ಲ್ ಪಂದ್ಯಾಟ ಮತ್ತು ವಿಲಾಸಿನಿ ಮುರಳೀದಾಸ್ ಕಾವೂರು ಇವರ ಸ್ಮರಣಾರ್ಥ ಅವಿಭಜಿತ ದ.ಕ ಜಿಲ್ಲಾ ಮಟ್ಟದ ಮಹಿಳೆಯರ ವಿಭಾಗದ ತ್ರೋಬಾಲ್ ಪಂದ್ಯಾಟವು ಮೂಡುಬಿದಿರೆ ಯ ಧವಲಾ ಕಾಲೇಜಿನಲ್ಲಿ ರವಿವಾರ ಬೆಳಿಗ್ಗೆ ಅರಂಭಗೊಂಡಿತು.
ಸಚಿವ ಕೆ.ಅಭಯಚಂದ್ರ ಜೈನ್ ಉದ್ಗಾಟಿಸಿದರು. ಸಂಘದ ಅಧ್ಯಕ್ಷ ರವಿ.ಎಸ್. ಪುತ್ರನ್ ಪದ್ಮನಾಭ ಕಟೀಲು., ಮುರಳಿದಾಸ್ ಕಾವುರು ಮತ್ತಿತರರಿದ್ದರು ಈ ಸಂದರ್ಭ ಉಪಸ್ಥಿತರಿದ್ದರು.