ಕೇರಳದಲ್ಲೊಂದು ಹೋಮ್ ಸ್ಟೇ ಪ್ರಕರಣ: ಹದಿ ಹರೆಯದ ಆರೋಪಿಗಳು ಪೊಲೀಸ್ ಬಲೆಗೆ
ಕೊಚ್ಚಿ: ಯುವಕನೊಂದಿಗೆ ಹೋಮ್ ಸ್ಟೇಗೆ ಬಂದಿದ್ದ ಯುವತಿಯನ್ನು ಕಟ್ಟಿಹಾಕಿ ಪೀಡಿಸಿ ಅತ್ಯಾಚಾರ ಮಾಡಿ ಅದರ ಫೋಟೊ ತೆಗೆದು ಆ ಯುವ ಜೋಡಿಗಳಿಬ್ಬರನ್ನೂ ಬ್ಲಾಕ್ ಮೈಲ್ ಮಾಡುತ್ತಿದ್ದ ಹದಿಹರೆಯದ ಯುವಕರ ತಂಡವೊಂದನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಈ ದುಷ್ಕೃತ್ಯ ವೆಸಗಿದ ಎಲ್ಲರೂ ಹದಿನೆಂಟರಿಂದ ಇಪ್ಪತ್ತು ವರ್ಷ ಪ್ರಾಯದವರೆಂದು ತಿಳಿದು ಬಂದಿದೆ. ಪೋರ್ಟ್‌ಕೊಚ್ಚಿಯಲ್ಲಿ ಈ ಘಟನೆ ನಡೆದಿತ್ತು. ಇದೀಗ ಪೊಲೀಸರು ಕ್ರಿಸ್ಟಿ(18)ಅಲ್ತಾಫ್(20)ಇಜಾಸ್, ಸಜ್ಜು(20) ಅಪ್ಪು(20) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯುವತಿ ಮತ್ತು ಯುವಕನ ಕೈಯಿಂದ ಇವರು ಆ ಚಿತ್ರಗಳನ್ನು ತೋರಿಸಿ ಒಂದು ಲಕ್ಷ ರೂಪಾಯಿ ಮತ್ತು ಆಭರಣಗಳನ್ನು ಹಾಗೂ ಕಾರನ್ನು ಇವರು ಕಿತ್ತುಕೊಂಡಿದ್ದರು ಎಂದು ಅಪಾದಿಸಲಾಗಿದೆ.ಬಂಧಿಸಲ್ಪಟ್ಟವರಲ್ಲಿ ಇರುವ ಕ್ರಿಸ್ಟಿ ಎಂಬಾತ ಆ ಜೋಡಿ ಉಳಿದು ಕೊಂಡಿದ್ದ ಹೋಮ್ ಸ್ಟೇಯಲ್ಲಿ ಕೆಲಸಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೊಚ್ಚಿ ಸಿಟಿ ಪೊಲೀಸ್ ಕಮಿಶನರ್‌ಗೆ ಯುವಕ ದೂರು ನೀಡಿದ್ದು ಆ ಪ್ರಕಾರ ಪೊಲೀಸರು ಆರೋಪಿಗಳನ್ನು ಫೋನ್ ಮೂಲಕ ಸಂಪರ್ಕಿಸುವಂತೆ ಹೇಳಿ ಇಲ್ಲಿಗೆ ಸಮೀಪದ ವೆಂಡುರುತ್ತಿ ಸೇತುವೆ ಬಳಿಗೆ ಕರೆಯಿಸಿಕೊಂಡು ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ನೇತೃತ್ವ ನೀಡಿದ್ದ ಕೊಚ್ಚಿ ಸಿವಿಲ್ ಪೊಲೀಸ್ ಅಧಿಕಾರಿಯೊಬ್ಬರ ಪುತ್ರನ ಹೊರತು ಉಳಿದವರನ್ನು ಬಂಧಿಸಿದ್ದೇವೆಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ನಡೆದು ಎರಡು ತಿಂಗಳವರೆಗೆ ಪೊಲೀಸರಿಗೆ ದೂರು ನೀಡಲು ಆ ಯುವ ಜೋಡಿ ಸಿದ್ಧರಾಗಿರಲಿಲ್ಲ. ಅಂತಿಮವಾಗಿ ಯುವಕ ಕಮಿಶನರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.