×
Ad

ದೆಹಲಿ : ಉತ್ತರ ಭಾರತ, ಈಶಾನ್ಯ ಭಾರತ, ದೆಹಲಿ, ಒಡಿಶಾ ಪಶ್ಚಿಮ ಬಂಗಾಳ ಮತ್ತು ಜಮ್ಮು ಕಾಶ್ಮೀರ ಮತ್ತು ಹಲವೆಡೆ ಶೀತಗಾಳಿ

Update: 2016-01-24 22:27 IST

ದೆಹಲಿ.ಜ.24: ಉತ್ತರ ಭಾರತ, ಈಶಾನ್ಯ ಭಾರತ, ದೆಹಲಿ, ಒಡಿಶಾ ಪಶ್ಚಿಮ ಬಂಗಾಳ ಮತ್ತು ಜಮ್ಮು ಕಾಶ್ಮೀರ ಸೇರಿದಂತೆ ಹಲವೆಡೆ ಶಿತಗಾಳಿ ಮುಂದುವರೆದಿದೆ.

ದೆಹಲಿಯಲ್ಲಿ ಕನಿಷ್ಠ4.6 ಡಿಗ್ರಿ ಸೆಲ್ಶೀಯಸ್ ತಾಪಮಾನ ದಾಖಲಾಗಿತ್ತು. ದಟ್ಟ ಮಂಜು ಕವಿದಿರುವ ಕಾರಣ 30 ರೈಲುಗಳನ್ನು ರದ್ದು ಪಡಿಸಲಾಗಿದೆ ಹಾಗೂ 20 ರೈಲುಗಳು ತಡವಾಗಲಿದೆ. 2 ವಿಮಾನ ಹಾರಾಟವನ್ನು ಸಹ ರದ್ದುಗೊಳಿಸಲಾಗಿದೆ.

ಇಂದು ಬೆಳಗಿನಜಾವ ಹೆಚ್ಚಾಗಿ ಶುಭ್ರ ಆಕಾಶವಿರಲಿದೆ ಹಾಗೂ ಕೆಲವೆಡೆ ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಶೀತಗಾಳಿಯಿಂದ ಕಳೆದ ಮೂರು ದಿನಗಳಲ್ಲಿ 7 ಜನ ಮೃತ ಪಟ್ಟಿದ್ದಾರೆ.

ಒಡಿಶಾದಲ್ಲೂ ಶೀತಗಾಳಿ ವಾತಾವರಣ ಮುಂದುವರೆದಿದ್ದು, ಒಳನಾಡಿನ 12 ಜಿಲ್ಲೆಗಳು ಇತ್ತೀಚಿನ ದಿನಗಳಲ್ಲೇ ಅತಿ ಚಳಿಯ ದಿನಗಳನ್ನು ಎದುರಿಸುತ್ತಿವೆ. ಕನಿಷ್ಠ ಉಷ್ಣಾಂಶ 3.5 ಡಿಗ್ರಿಗೆ ಇಳಿದಿರುವ ಫುಲ್‌ಬಾನಿ, ರಾಜ್ಯದ ಅತಿ ಶೀತ ಪ್ರದೇಶವಾಗಿ ಬದಲಾಗಿದೆ. ಮುಂದಿನ ಒಂದು ವಾರದಲ್ಲೂ ತಾಪಮಾನ ಇದೇ ರೀತಿ ಕುಸಿಯುವುದಾಗಿ ಹವಾಮಾನ ಇಲಾಖೆ ವರದಿ ತಿಳಿಸಿದೆ.

ದಕ್ಷಿಣ ಒಡಿಶಾದಲ್ಲೂ ತೀವ್ರ ಚಳಿ ವಾತಾವರಣ ಮುಂದುವರೆದಿದ್ದು, ರಾತ್ರಿಯ ವೇಳೆ, ತಾಪಮಾನ ತೀವ್ರ ಕುಸಿಯುತ್ತಿದೆ.

ಒಣ ಹವೆಯ ನಡುವೆಯೂ ಹಿಮಾಚಲ ಪ್ರದೇಶದಲ್ಲಿ ಶೀತ ಗಾಳಿ ಮುಂದುವರೆದಿದೆ. ಹಾಗೂ ತಾಪಮಾನ ಇನ್ನಷ್ಟು ಕುಸಿಯಲಿದೆ ಎಂದು ಶಿಮ್ಲಾ ಹವಾಮಾನ ಇಲಾಖೆ ನಿರ್ದೇಶಕ ಮನ್‌ಮೋಹನ್ ಸಿಂಗ್ ತಿಳಿಸಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ವರೆಗೆ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News