×
Ad

ಮೂಡುಬಿದಿರೆ : ಒಂಟಿಕಟ್ಟೆ ಕೋಟಿ- ಚೆನ್ನಯ ಕಂಬಳ ಫಲಿತಾಂಶ

Update: 2016-01-24 22:55 IST

ಮೂಡುಬಿದಿರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ಎರಡು ದಿನಗಳ ಕಾಲ ನಡೆದ 14ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳವು ಭಾನುವಾರ ಮಧ್ಯಾಹ್ನ ಮುಕ್ತಾಯಗೊಂಡಿದ್ದು, ಸ್ಪರ್ಧೆಯ ವೇಳೆ ಬಾರಕೂರು ಶಾಂತರಾಮ ಶೆಟ್ಟಿ ಅವರ ಕೋಣಗಳು 6 1/2(ಆರೂವರೆ) ಕೋಲು ನಿಶಾನೆಗೆ ನೀರು ಹಾಯಿಸಿ ಗಮನಸೆಳೆದಿದೆ. ಈ ಕೋಣಗಳನ್ನು ಓಡಿಸಿದವರು ಮಂದಾರ್ತಿ ಶಿರೂರು ಗೋಪಾಲ ನಾಯ್ಕಿ.

 ಫಲಿತಾಂಶ ವಿವರ: ಹಗ್ಗ ಹಿರಿಯ:ಮೂಲ್ಕಿ ಪಯ್ಯಿಟ್ಟು ಸಾಲ್ಯಾನ್ .ಎ(ಪ್ರಥಮ), ಕೋಣ ಓಡಿಸಿದವರು, ಪಣಪೀಲು ಪ್ರವಿಣ್ ಕೋಟ್ಯಾನ್. ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್.ಎ(ದ್ವಿತೀಯ). ಕೋಣ ಓಡಿಸಿದವರು, ಇರ್ವತ್ತೂರು ಆನಂದ.
ಹಗ್ಗ ಕಿರಿಯ:ಕಾಂತಾವರ ಅಂಬೋಡಿಮಾರು ರಘುನಾಥ ದೇವಾಡಿಗ(ಪ್ರಥಮ). ಕೋಣ ಓಡಿಸಿದವರು, ಪಣಪೀಲು ಪ್ರವೀಣ್ ಕೋಟ್ಯಾನ್. ಮಾರ್ನಾಡು ಹೆಚ್.ಪಿ ನಿವಾಸ ದಿ. ನಾರಾಯಣ ಆಚಾರ್. ಎ(ದ್ವಿತೀಯ). ಕೋಣ ಓಡಿಸಿದವರು ಕಾಂತಾವರ ಬಾರಾಡಿ ಪ್ರಶಾಂತ್.
ನೇಗಿಲು ಹಿರಿಯ:ಇರುವೈಲು ಪಾಣಿಲ ಬಾಡ ಪೂಜಾರಿ(ಪ್ರಥಮ). ಕೋಣ ಓಡಿಸಿದವರು ಇರ್ವತ್ತೂರು ಆನಂದ. ಬೋಳದಗುತ್ತು ಸತೀಶ ಶೆಟ್ಟಿ(ದ್ವಿತೀಯ). ಕೊಣ ಓಡಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ ಎಂ. ಶೆಟ್ಟಿ.
ನೇಗಿಲು ಕಿರಿಯ:ಬೋಳದಗುತ್ತು ಸತೀಶ್ ಶೆಟ್ಟಿ. ಬಿ(ಪ್ರಥಮ).ಕೋಣ ಓಡಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ ಎಂ. ಶೆಟ್ಟಿ. ಬೆಳುವಾಯಿ ಪೆಲಕುಂಜ ಅವಾನಿ ಪ್ರಭಾಕರ ಹೆಗ್ಡೆ(ದ್ವಿತೀಯ). ಕೋಣ ಓಡಿಸಿದವರು ಕಡಂದಲೆ ಭವಾನೀಶ್.
ಅಡ್ಡ ಹಲಗೆ:ತೆಕ್ಕಟ್ಟೆ ಮೇಲ್ಗುಡ್ಡೆ ಮನೆ ಆನಂದ ದೇವಾಡಿಗ(ಪ್ರಥಮ). ಕೋಣ ಓಡಿಸಿದವರು ಮಂದಾರ್ತಿ ಶಿರೂರು ಮುದ್ದುಮನೆ ಗೋಪಾಲ ನಾಯ್ಕೆ. ಮಾಳ ಕಾರ್ತಿಕ್ ಭಾಸ್ಕರ್ ಆಚಾರ್.ಎ (ದ್ವಿತೀಯ).ಕೋಣ ಓಡಿಸಿದವರು ಸಾವ್ಯ ಗಂಗಯ್ಯ ಪೂಜಾರಿ. ಬಾರಕೂರು ಶಾಂತರಾಮ ಶೆಟ್ಟಿ ಅವರ ಕೋಣಗಳು 6 1/2(ಆರೂವರೆ) ಕೋಲು ನಿಶಾನೆಗೆ ನೀರು ಹಾಯಿಸಿ ಗಮನಸೆಳೆದಿದೆ. ಈ ಕೋಣಗಳನ್ನು ಓಡಿಸಿದವರು ಮಂದಾರ್ತಿ ಶಿರೂರು ಗೋಪಾಲ ನಾಯ್ಕಿ.
ಒಟ್ಟು 173 ಜತೆ ಕೋಣಗಳು ಭಾಗವಹಿಸಿದ್ದವು. ಸಚಿವ ಅಭಯಚಂದ್ರ ಜೈನ್, ಕಂಬಳ ಸಮಿತಿ ಪ್ರಮುಖರಾದ ಗುಣಪಾಲ ಕಡಂಬ, ಭಾಸ್ಕರ ಕೋಟ್ಯಾನ್, ಸುರೇಶ್ ಪ್ರಭು, ರತ್ನಾಕರ ಸಿ. ಮೊಯಿಲಿ ಮತ್ತಿತರರ ಉಪಸ್ಥಿತಿಯಲ್ಲಿ ಆಮಂತ್ರಿತ ಅತಿಥಿಗಳು ವಿಜೇತ ಕೋಣಗಳ ಮಾಲೀಕರಿಗೆ ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News