ಮಂಗಳೂರು : ಬಾವಿಗೆ ಬಿದ್ದು ಮಗು ಮತ್ಯು
Update: 2016-01-24 23:30 IST
ಮಂಗಳೂರು, ಜ. 25: ಎರಡು ವರ್ಷದ ಮಗುವೊಂದು ಅಕಸ್ಮಾತ್ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಇಂದು ಬಿಜೈನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಬಿಜೈಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ನಾಗರಾಜ್ ಎಂಬವರ ಪುತ್ರಿ ಅಶ್ವಿನಿ ಎಂದು ಗುರುತಿಸಲಾಗಿದೆ.
ಮೂಲತಃ ಬಿಜಾಪುರದ ನಿವಾಸಿ ನಾಗರಾಜ್ ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮಗು ಆಟವಾಡುತ್ತಾ ಹೋಗುತ್ತಿದ್ದ ಸಂದರ್ಭದಲ್ಲಿ ಮನೆ ಸಮೀಪದ ಬಾವಿಯೊಳಗೆ ಆಕಸ್ಮಾತ್ ಬಿದ್ದು ಮೃತಪಟ್ಟಿದೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.