×
Ad

ಬಾಳೆಪುಣಿ: ಸಮಗ್ರ ಕೃಷಿ ತರಬೇತಿ ಕಾರ್ಯಕ್ರಮ

Update: 2016-01-24 23:30 IST


ಉಳ್ಳಾಲ,ಜ,24: ಕೇವಲ ಒಂದು ಬೆಳೆಗೆ ಸೀಮಿತಗೊಳ್ಳದೆ ಆಧುನಿಕ ಕೃಷಿ ಪದ್ಧತಿ, ನೂತನ ತಂತ್ರಜ್ಞಾನ, ಆವಿಷ್ಕಾರ ಗಳನ್ನು ಬಳಸಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆಯಲ್ಲಿ ಸಮಗ್ರ ಕೃಷಿ ಪದ್ಧತಿಯನ್ನ್ಲು ಅಳವಡಿಸಿ ಲಾಭವನ್ನು ಪಡೆಯಬಹುದು ಎಂದು ಬ್ರಹ್ಮಾವರದ ವಲಯ ಸಹ ಸಂಶೋಧನಾ ನಿರ್ದೇಶಕ ಡಾ.ಎಂ. ಹನುಮಂತಪ್ಪಅಭಿಪ್ರಾಯಪಟ್ಟರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವತಿಯಿಂದ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಪಂನ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಹಮ್ಮಿಕೊಂಡ ಕೃಷಿ ಗ್ರಾಮ ದತ್ತು ಯೋಜನೆಯಡಿಯಲ್ಲಿ ಸಮಗ್ರ ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

   ಬ್ರಹ್ಮಾವರದ ಕೃಷಿ ವಿಸ್ತರಣಾ ಸಹ ನಿರ್ದೇಶಕ ಡಾ.ಎಸ್.ಯು.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಲಕ್ಷ್ಮಣ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಹೆಚ್.ಹನುಮಂತಪ್ಪ, ಬಾಳೆಪುಣಿ ಪಿಡಿಒ ರವಿಕುಮಾರ್ ಹಾಗೂ ಪ್ರಗತಿಪರ ಕೃಷಿಕ ರಮೇಶ್ ಶೇಣವ ಉಪಸ್ಥಿತರಿದ್ದರು. ಸಮಗ್ರ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಸಿಪಿಸಿಆರ್‌ಐ ಕಾಸರಗೋಡಿನ ವಿಜ್ಞಾನಿ ಡಾ.ರವಿಭಟ್,ಡಾ.ಹರೀಶ್ ಶೆಣೈ, ಡಾ.ಅಣ್ಣಪ್ಪಸ್ವಾಮಿ ಟಿ.ಎಸ್., ಡಾ.ರವೀಂದ್ರ ಆರ್.ಪಾಟೀಲ್, ಬ್ರಹ್ಮಾವರ ಸಂಶೋಧನಾ ಕೇಂದ್ರದ ಡಾ.ರಾಜಣ್ಣ ಅಡಕೆ, ತೆಂಗು, ಭತ್ತ, ಬಾಳೆ, ಗೇರು, ತರಕಾರಿ ಬೆಳೆ, ಮೀನುಗಾರಿಕೆ, ಕೋಳಿ ಸಾಕಣಿಕೆಯ ಬಗ್ಗೆ ಮಾಹಿತಿ ನೀಡಿದರು. ಉಳ್ಳಾಲ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಲಕ್ಷ್ಮಣ ಸ್ವಾಗತಿಸಿದರು. ಕೀಟಶಾಸ್ತ್ರ ವಿಜ್ಞಾನಿ ಎ.ಎಚ್.ತುಕರಾಮ್ ವಂದಿಸಿದರು. ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News