×
Ad

ಕುತುಬಿ ನಗರದಲ್ಲಿ ಬುರ್ದಾ ಮಜ್ಲಿಸ್

Update: 2016-01-24 23:31 IST


ಉಳ್ಳಾಲ, ಜ.24: ಕಿನ್ಯ-ಕುತುಬಿನಗರದಲ್ಲಿ ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಜಂಟಿ ಆಶ್ರಯದಲ್ಲಿ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಅಸ್ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ದುಆಗೈದರು. ಅಶ್ರಫ್ ಸಖಾಫಿ ಕನ್ನಂಗಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಮಾಸ್ಟರ್ ಸವಾದ್, ಅಮೀನ್ ತಳಿಪರಂಬು, ಮುಹಮ್ಮದ್ ಫಝಲ್ ಮತ್ತು ಹಾಫಿಳ್ ಮುಹಮ್ಮದ್ ಫಲ್‌ಳ್ ಕಣ್ಣೂರು, ಆರಿಫ್ ತಳಿಪರಂಬು ಹಾಡಿದರು.

ಎಸ್‌ವೈಎಸ್ ದ.ಕ. ಜಿಲ್ಲಾ ಉಪಾಧ್ಯಕ್ಷ ಅಶ್-ಅರಿಯ್ಯ ಸಿ.ಎಚ್.ಮಹಮ್ಮದಲಿ ಸಖಾಫಿ ಸುರಿಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ದುಸ್ಸಮದ್ ಅಮಾನಿ ಉಸ್ತಾದ್, ಉದ್ಯಮಿ ಏಷ್ಯನ್ ಬಾವ ಹಾಜಿ, ಅಶ್ರಫ್ ಸಖಾಫಿ ಕಿನ್ಯ, ಅಜ್ಜಿನಡ್ಕ ಮಳ್‌ಹರ್ ಅಲ್ ಹಿದಾಯ ಸಂಸ್ಥೆಯ ಸಂಚಾಲಕ ಎನ್.ಎಸ್.ಉಮರಬ್ಬ, ಕೆ.ಸಿ.ರೋಡ್ ಎಸ್‌ವೈಎಸ್ ಸದಸ್ಯ ಉಸ್ಮಾನ್ ಮೊದಲಾದವರು ಉಪಸ್ಥಿತರಿದ್ದರು.
ಎಸ್‌ವೈಎಸ್ ಕುತುಬಿನಹರ ಶಾಖೆಯ ಉಪಾಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News