ಮಿತ್ತಬೈಲ್: ನಾಳೆ ಮಾನವ ಸರಪಳಿ
ಮಂಗಳೂರು, ಜ.24: ಗಣರಾಜ್ಯೋತ್ಸವದ ಅಂಗವಾಗಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಱರಾಷ್ಟ್ರ ರಕ್ಷಣೆಗೆ ಸೌಹಾರ್ದದ ಸಂಕಲ್ಪೞಧ್ಯೇಯ ವಾಕ್ಯದಡಿ ಮಾನವ ಸರಪಳಿ ಹಾಗೂ ಸಾರ್ವಜನಿಕ ಸಮಾರಂಭ ಜ.26ರಂದು ನಡೆಯಲಿದೆ ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಸರಪಳಿಯು ಅಂದು ಅಪರಾಹ್ನ 3 ಗಂಟೆಗೆ ಪಾಣೆಮಂಗಳೂರಿನ ಗೂಡಿನಬಳಿ ಮಸೀದಿಯಿಂದ ಆರಂಭ ಗೊಂಡು, ಮಿತ್ತಬೈಲ್‌ನಲ್ಲಿ ಸಮಾಪನಗೊಳ್ಳಲಿದೆ. ಬಳಿಕ ನಡೆಯುವ ಸಮಾರೋಪ ಸಮಾರಂಭವನ್ನು ಅರಣ್ಯ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ಸಮಸ್ತ ಕ್ರೇಂದ್ರ ಮುಶಾವರ ಸದಸ್ಯ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸುವರು. ದ.ಕ. ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಆಕ್ಕೆ ನೇತೃತ್ವ ನೀಡುವರು. ಸಚಿವ ಯು.ಟಿ.ಖಾದರ್, ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಉಪಸ್ಥಿತರಿರುವರು ಎಂದವರು ತಿಳಿಸಿದರು.