×
Ad

ಮಲ್ಪೆ ಬೀಚ್‌ನಲ್ಲಿ ವೈಫೈ ವ್ಯವಸ್ಥೆಗೆ ಚಾಲನೆ

Update: 2016-01-24 23:56 IST

ಉಡುಪಿ, ಜ.24: ಮಲ್ಪೆ ಬೀಚ್ ನಲ್ಲಿ ಇಂದು ವೈಫೈ ವ್ಯವಸ್ಥೆಗೆ ಚಾಲನೆ ನೀಡುವ ಮೂಲಕ ದೇಶದ ಮೊತ್ತಮೊದಲ ‘ವೈಫೈ ಬೀಚ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ಬಿಎಸ್‌ಎನ್‌ಎಲ್ ವತಿಯಿಂದ ದಿನದ 24 ಗಂಟೆಗಳ ಕಾಲ ವೈಫೈ ಸೌಲಭ್ಯ ಒದಗಿಸಲಾಗಿದ್ದು, ಬೀಚ್‌ಗೆ ಆಮಿಸುವ ಸಾರ್ವಜನಿಕರು ಯಾವುದೇ ಮೊಬೈಲ್ ಸಂಖ್ಯೆಯಿಂದ ಅರ್ಧ ಗಂಟೆಗಳ 4ಜಿ ವೇಗದ ವೈಫೈ ಸೌಲಭ್ಯ ವನ್ನು ಪಡೆಯಬಹುದಾಗಿದೆ.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಮಲ್ಪೆಅಭಿವೃದ್ಧಿ ಸಮಿತಿ ವತಿಯಿಂದ ಮಲ್ಪೆಬೀಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈಫೈ ಸೌಲಭ್ಯವನ್ನು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಇಲ್ಲಿ ಅರ್ಧಗಂಟೆಯ ಬದಲು 24 ಗಂಟೆ ಗಳ ಕಾಲ ವೈಫೈ ಸೌಲಭ್ಯವನ್ನು ಒದಗಿಸುವ ಕುರಿತಂತೆ ಸಂಬಂಧಪಟ್ಟ ಸಚಿವ ರೊಂದಿಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.


ಮಲ್ಪೆಬೀಚ್‌ಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಎಲ್ಲ ಮೂಲಭೂತ ಸೌಲಭ್ಯ ಗಳನ್ನು ಕಲ್ಪಿಸಲಾಗಿದೆ. 80 ಲಕ್ಷ ರೂ. ವೆಚ್ಚದಲ್ಲಿ ಬೀಚ್‌ನ ಸ್ವಚ್ಛತೆಗೆ ಗಮನ ಹರಿಸಲಾಗಿದ್ದು, ವಾಚ್ ಟವರ್ ನಿರ್ಮಾಣ, ಸ್ವಚ್ಛತಾ ಕೆಲಸಗಾರರ ನೇಮಕ, ಲೈಫ್‌ಗಾರ್ಡ್‌ಗಳ ನೇಮಕ, ಟಾಯ್ಲೆಟ್, ಪಾರ್ಕಿಂಗ್ ವ್ಯವಸ್ಥೆ ಹಾಗೂ 4ರಿಂದ 5 ಕೋಟಿ ರೂ. ವೆಚ್ಚ ದಲ್ಲಿ ಬೀಚ್‌ಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. 70 ಲಕ್ಷ ರೂ. ವೆಚ್ಚದಲ್ಲಿ ಬೀಚ್ ಕ್ಲೀನಿಂಗ್ ಯಂತ್ರವನ್ನು ಖರೀದಿಸಲಾಗಿದೆ ಎಂದವರು ಹೇಳಿದರು.

ಪೌರಾಯುಕ್ತ ಡಿ.ಮಂಜುನಾಥಯ್ಯ, ಬಿಎಸ್ಸೆನ್ನೆಲ್ ಅಧಿಕಾರಿ ವಿಷ್ಣುಮೂರ್ತಿ, ಬೀಚ್ ನಿರ್ವಹಣಾ ಸಮಿತಿಯ ಸುದೇಶ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News