ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿಯ ಸೆರೆ
Update: 2016-01-24 23:59 IST
ಮಂಗಳೂರು, ಜ. 24: ಅರಣ್ಯ ವೀಕ್ಷಕರ ಹುದ್ದೆಯ ನೇಮಕಾತಿ ಸಂಬಂಧಿಸಿ ಇಂದು ನಡೆದ ಪರೀಕ್ಷೆಗೆ ಅಭ್ಯರ್ಥಿಯೋರ್ವನ ಪರವಾಗಿ ಇನ್ನೋರ್ವ ಪರೀಕ್ಷೆ ಬರೆಯುತ್ತಿದ್ದಾಗ ಸಿಕ್ಕಿ ಬಿದ್ದಿರುವ ಘಟನೆ ಇಂದು ನಡೆದಿದೆ.
ಕರ್ನಾಟಕ ಸರಕಾರ ಅರಣ್ಯ ವೀಕ್ಷಕರ ಹುದ್ದೆಯ ನೇರ ನೇಮಕಾತಿ ಪರೀಕ್ಷೆಯ ಬಗ್ಗೆ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬೆಳಗ್ಗೆ 10 ಗಂಟೆಯಿಂದ ಲಿಖಿತ ಪರೀಕ್ಷೆ ಪ್ರಾರಂಭಗೊಂಡಿತ್ತು. ಪರೀಕ್ಷೆಗೆ ಉತ್ತರ ಬರೆಯಬೇಕಾದ ಸಣ್ಣಬಸಪ್ಪ ಎಂಬವರ ಬದಲಿಗೆ ಯೋಗೀಶ್ ಎಂಬಾತ ಪರೀಕ್ಷೆ ಬರೆಯುತ್ತಿದ್ದ ಎನ್ನಲಾಗಿದೆ. ಕೂಡಲೇ ಆರೋಪಿಯನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.