×
Ad

ಸುಳ್ಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

Update: 2016-01-25 16:54 IST

ಸುಳ್ಯ: ಭಾರತ ಚುನಾವಣಾ ಆಯೋಗದ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮತದಾನದ ಮಹತ್ವ ಕೊರತೆ ಹಾಗೂ ಮಾಹಿತಿ ಕೊರತೆಯಿಂದ ಮತದಾನದ ಪ್ರಮಾಣ ಕುಂಠಿತವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಶೇ.50 ಮತದಾನ ಆಗುತ್ತಿದ್ದು, ಮತದಾರರ ದಿನಾಚರಣೆ ಆರಂಭವಾಗಿ, ಮಾಹಿತಿ, ಪ್ರಚಾರ ಪಡೆದ ಬಳಿಕ ಶೇ.80ರಷ್ಟು ಮತದಾನ ಆಗುತ್ತಿದೆ ಎಂದವರು ಹೇಳಿದರು. ಯುವಜನ ಸೇವಾ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ದೇವರಾಜ ಮುತ್ಲಾಜೆ ಪ್ರತಿಜ್ಞಾ ವಿಧಿ ಬೋಧಿಸಿದರು. ಹೊಸದಾಗ ಮತದಾರರಾಗಿ ನೋಂದಾಯಿಸಿದವರಿಗೆ ಗುರುತು ಚೀಟಿಯನ್ನು ವಿತರಿಸಲಾಯಿತು. ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಎಂ.ರಾಮಚಂದ್ರ ಭಟ್ ವಿಶೇಷ ಉಪನ್ಯಾಸ ನೀಡಿದರು. ನಮ್ಮ ಸಂವಿಧಾನ ಹಕ್ಕುಗಳೊಂದಿಗೆ ಕರ್ತವ್ಯಗಳನ್ನು ನೀಡಿದ್ದು, ಮತದಾನ ಕೂಡಾ ನಮ್ಮ ಕರ್ತವ್ಯವಾಗಿದೆ. ಮುಕ್ತ, ನ್ಯಾಯಸಮ್ಮತ ಹಾಗೂ ನಿರ್ಭೀತಿಯಿಂದ ಮತದಾನ ಮಾಡಲು ಆಯೋಗ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದೆ. ಹಾಗಿದ್ದೂ ಯುವಜನತೆ ಮತದಾನದತ್ತ ಆಸಕ್ತಿ ವಹಿಸುತ್ತಿಲ್ಲ. ಅವರೆಲ್ಲರೂ ಮತ ಚಲಾವಣೆ ಮಾಡುವ ಮೂಲಕ ಶೇಕಡಾ ಪ್ರಮಾಣ ಹೆಚ್ಚಿದಷ್ಟು ಯೋಗ್ಯ ಅಭ್ಯರ್ಥೀಗಳನ್ನು ಆಯ್ಕೆ ಮಾಡಲು ಸಹಾಯಕವಾಗುತ್ತದೆ ಎಂದ ಅವರು ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದರೆ, ಅದು ಅಪರಾಧವಾಗುತ್ತದೆ. ಇನ್ನೊಬ್ಬರ ಹೆಸರಿನಲ್ಲಿ ಮತ ಚಲಾವಣೆ ಕ್ರಿಮಿನಲ್ ಅಪರಾಧ ಎಂದರು.

ತಹಶೀಲ್ದಾರ್ ಅನಂತಶಂಕರ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹ ಸಹಾಐಕ ನಿರ್ದೇಶಕ ಚಂದ್ರಶೇಖರ ಪೇರಾಲು ವೇದಿಕೆಯಲ್ಲಿದ್ದರು. ಉಪತಹಶೀಲ್ದಾರ್ ರಾಮಣ್ಣ ನಾಯ್ಕ ಸ್ವಾಗತಿಸಿ, ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪ ಗೌಡ ವಂದಿಸಿದರು. ನರಿಯಪ್ಪ ಮಠದ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News