×
Ad

ಪದ್ಮ ಪ್ರಶಸ್ತಿ ಪ್ರಕಟ: ರಜನಿಕಾಂತ್ ಗೆ ಪದ್ಮವಿಭೂಷಣ, ಸೈನಾ, ಸಾನಿಯಾಗೆ ಪದ್ಮಭೂಷಣ

Update: 2016-01-25 17:39 IST

ಹೊಸದಿಲ್ಲಿ, ಜ.25:  ದೇಶದ ಉನ್ನತ ನಾಗರಿಕ ಪುರಸ್ಕಾರವಾಗಿರುವ ಪದ್ಮಪ್ರಶಸ್ತಿ ಪ್ರಕಟಗೊಂಡಿದ್ದು, ಸೂಪರ‍್ಸ್ಟಾರ‍್  ರಜನಿಕಾಂತ್‌ ಪದ್ಮವಿಭೂಷಣ , ಟೆನಿಸ್‌  ಆಟಗಾರ್ತಿ ಸಾನಿಯಾಮಿರ್ಝಾ , ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್  ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ಧಾರೆ.
ಕೇಂದ್ರ ಸರಕಾರ ಇಂದು ಪ್ರಶಸ್ತಿ ಪ್ರಕಟಿಸಿದ್ದು,  ನಟ ರಜನಿಕಾಂತ್‌,  ಮಾಧ್ಯಮ ದೊರೆರಾಮೋಜಿರಾವ್, ಜಮ್ಮು ಮತ್ತು ಕಾಶ್ಮೀರದ ಮಾಜಿರಾಜ್ಯಪಾಲ ಜಗಮೋಹನ್, ಆಧ್ಯಾತ್ಮ ಗುರು ಶ್ರೀರವಿಶಂಕರ‍್ಗುರೂಜಿ ಮತ್ತು ರಿಲಯನ್ಸ್ಸಂಸ್ಥೆಗಳಸ್ಥಾಪಕ  ಧೀರೊಬೈ  ಅಂಬಾನಿ ಪದ್ಮವಿಭೂಷಣ ಗೌರವಕ್ಕೆಭಾಜನರಾಗಿದ್ಧಾರೆ.


ಮಾಜಿ ಸಿಎಜಿ ವಿನೋದ್‌ ರಾಯ್‌, ಬಾಲಿವುಡ್‌ ನಟ ಅನುಪಮ್ಖೇರ್‌,  ಟೆನಿಸ್  ಆಟಗಾರ್ತಿ ಸಾನಿಯಾಮಿರ್ಝಾ , ಬ್ಯಾಡ್ಮಿಟನ್‌ ಆಟಗಾರ್ತಿ ಸೈನಾನೆಹ್ವಾಲ್, ಹಾಡುಗಾರ ಉದಿತ್‌ ನಾರಾಯಣ್, ಬೆನೆಟ್‌-ಕೋಲ್ಮನ್‌ ಕಂಪೆನಿಯ ಇಂಧು  ಜೈನ್  ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ಧಾರೆ.


ಹಿರಿಯ ವಕೀಲ ಉಜ್ವಲ್‌ ನಿಕ್ಕಮ್‌, ನಟ ಅಜಯ್‌ ದೇವಗನ್‌, ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಮತ್ತಿತರರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿದೆ.

ಕೇಂದ್ರ ಗೃಹ ಸಚಿವಾಲಯ ನೀಡಿರುವ ೨೦೧೬ ನೆ ಸಾಲಿನ ಪದ್ಮ ಪ್ರಶಸ್ತಿಗಳ ಪೂರ್ಣ ಪಟ್ಟಿ ಇಲ್ಲಿದೆ :





  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News