×
Ad

ಮಂಗಳೂರು : ಗಣರಾಜ್ಯೋತ್ಸವ - ವಾಹನ ಸಂಚಾರದಲ್ಲಿ ಮಾರ್ಪಾಡು

Update: 2016-01-25 18:17 IST

ಮಂಗಳೂರು : ಜ. 26 ರಂದು ಮಂಗಳೂರು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯ ದಿನಾಚರಣೆಯ ಸಮಯದಲ್ಲಿ ಭದ್ರತಾ ದೃಷ್ಟಿಯಿಂದ ಎ.ಬಿ ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ತನಕ ಹಾಗೂ ವಿರುದ್ದ ದಿಕ್ಕಿನಲ್ಲಿ ಕಾರ್ಯಕ್ರಮಕ್ಕೆ ಸಂಬಂದಿಸಿದ ವಿಐಪಿ ವಾಹನಗಳು ಹಾಗೂ ಇಲಾಖಾ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳ ಪ್ರವೇಶ ಯಾ ಪಾರ್ಕಿಂಗ

    ನ್ನು ಸಂಪೂರ್ಣ ನಿಷೇದಿಸಲಾಗಿದೆ. ಎ.ಬಿ.ಶೆಟ್ಟಿ ವೃತ್ತದಿಂದ ಫುಟ್‌ಬಾಲ್ ಮೈದಾನದ ತನಕ ಯು ಪಿ ಮಲ್ಯ ರಸ್ತೆಯಲ್ಲಿ ಮೈದಾನದ ಬದಿ ಎಲ್ಲಾ ತೆರನಾದ ವಾಹನಗಳನ್ನು ನಿಷೇದಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಸಾರ್ವಜನಿಕರು ತಮ್ಮ ವಾಹನಗಳನ್ನು ಕ್ರಮವಾಗಿ ಗೇಟ್‌ವೇ ಹೋಟೆಲ್ ರಸ್ತೆಯ ಎಡಭಾಗ, ಪಾಂಡೇಶ್ವರ ರಸ್ತೆಯ ಒಂದು ಬದಿಯಲ್ಲಿ ಪಾರ್ಕ್ ಮಾಡುವುದು. ಕಾರ್ಯಕ್ರಮಕ್ಕೆ ಶಾಲಾ ವಿಧ್ಯಾರ್ಥಿಗಳನ್ನು ಕರೆದೊಯ್ಯುವ ಎಲ್ಲಾ ವಾಹನಗಳನ್ನು ರೊಜಾರಿಯೋ ರಸ್ತೆಯ ಎಡಭಾಗದಲ್ಲಿ ಪಾರ್ಕ್ ಮಾಡುವುದು. ಎ.ಬಿ.ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ಕಡೆಗೆ ಹೋಗುವ ವಾಹನಗಳು ಪಾಂಡೇಶ್ವರ ಕಟ್ಟೆ ಬಳಿಯ ಕ್ರಾಸ್ ರಸ್ತೆ, ರೊಜಾರಿಯೋ ಆಗಿ ಸಂಚರಿಸಬೇಕು. . ಅದೇ ರೀತಿ ಹ್ಯಾಮಿಲ್ಟನ್ ವೃತ್ತದಿಂದ ಎ.ಬಿ.ಶೆಟ್ಟಿ ಕಡೆಗೆ ಸಂಚರಿಸುವ ವಾಹನಗಳು ಲೇಡಿಗೋಷನ್ ಕ್ಲಾಕ್ ಟವರ್ ಮೂಲಕ ಸಂಚರಿಸುವುದು. ಎಂದು ಮಂಗಳೂರು ನಗರ ಪೋಲಿಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News