ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆಗಟ್ಟಲು ವಿಶೇಷ ಕಾಯ್ದೆ ನಾಳೆಯಿಂದ ಜಾರಿಗೆ

Update: 2016-01-25 13:17 GMT

ಹೊಸದಿಲ್ಲಿ, ಜ.25: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಮತ್ತು ಈ ಸಮುದಾಯಗಳ ಜನರ ಮೇಲೆ  ಸಾಮಾಜಿಕ , ಅರ್ಥಿಕ ಮತ್ತಿತರ  ಬಹಿಷ್ಕಾರ ಹೇರಿ  ಅವಮಾನಿಸುವುದನ್ನು ತಡೆಗಟ್ಟಲು ರೂಪಿಸಲಾದ ಹೊಸ ಕಾಯ್ದೆ ಗಣರಾಜ್ಯೋತ್ಸವ ದಿನವಾಗಿರುವ ನಾಳೆಯಿಂದ ಜಾರಿಗೆ ಬರಲಿದೆ.
ಹೊಸ ಕಾಯ್ದೆಯಡಿ ಪ್ರಕರಣಗಳ ವಿಚಾರಣೆ ಗೆ ವಿಶೇಷ ನ್ಯಾಯಾಲಯ ಆರಂಭಗೊಳ್ಳಲಿದ್ದು, ಈ ನ್ಯಾಯಾಲಯಕ್ಕೆ ವಿಶೇಷ ಸರಕಾರಿ ಅಭಿಯೋಜಕರ ನೇಮಕಗೊಳ್ಳಲಿದೆ.
'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ತಿದ್ದುಪಡಿ ಕಾಯ್ದೆ 2015' (ದೌರ್ಜನ್ಯ ತಡೆ) ಈ ಕಾಯ್ದೆಯಡಿ ಪ್ರಕರಣ ದಾಖಲಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಎರಡು ತಿಂಗಳ ಒಳಗಾಗಿ ವಿಚಾರಣೆಯನ್ನು ಮುಗಿಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವ ಅಧಿಕಾರ ಈ ನ್ಯಾಯಾಲಯಗಳಿಗೆ ಇರುತ್ತದೆ.

:

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News