ಪೋರ್ಚ್‌ಗಲ್ ಅಧ್ಯಕ್ಷರಾಗಿ ರೆಬೆಲ್ಲೋ ಡಿಸೋಝ

Update: 2016-01-25 13:55 GMT

ಲಿಸ್ಬನ್: ಪೋರ್ಚುಗಲ್‌ನ ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ ಸೋಶಿಯಲ್ ಡೆಮಕ್ರಾಟಿ ಪಾರ್ಟಿಯ (ಎಸ್‌ಡಿಪಿ) ಅಭ್ಯರ್ಥಿರೆಬೆಲ್ಲೋ ಡಿಸೋಝ ವಿಜೇತರಾಗಿದ್ದಾರೆ. ದೇಶದ ಚುನಾವಣಾ ಸಚಿವಾಲಯದ ಪ್ರಕಾರ ರೆಬೆಲ್ಲೋ ಡಿಸೋಝ ಒಟ್ಟು ಮತಗಳಲ್ಲಿ ಶೇ. 99 ರಷ್ಟು ಎಣಿಕೆ ಕಾರ್ಯ ಮುಗಿದಾಗ ಶೇ. 52 ಮತವನ್ನು ಗಳಿಸಿದ್ದಾರೆ. ಇದು ಅವರ ಗೆಲುವಿಗೆ ಸಾಲುತ್ತದೆ. ರೆಬೊಲ್ಲೊ(67) ಮಾರ್ಚ್‌ನಲ್ಲಿ ದೇಶದ 20ನೇ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಈಗಿನ ರಾಷ್ಟ್ರಾಧ್ಯಕ್ಷ ಅನಿಬೆಲ್ ಕ್ವಾಕೋ ಸಿಲ್ವಾರ ಸ್ಥಾನ ತೆರವು ಗೊಳಿಸಲಿದ್ದಾರೆ. ರೆಬೆಲ್ಲೋ ಲಿಸ್ಬನ್ ವಿಶ್ವವಿದ್ಯಾನಿಯದ ಕಾನೂನು ವಿಭಾಗದ ಪ್ರೊಫೆಸರ್ ಆಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಹತ್ತು ಮಂದಿ ಅಭ್ಯರ್ಥಿಗಳು ಇದ್ದರು. ರೆಬೆಲ್ಲೋ ಇದಕ್ಕಿಂತ ಮೊದಲು ಟಿವಿ ಪ್ರಸ್ತುತಿಕಾರ ಹಾಗೂ ಪತ್ರಿಕೆಯ ಸಂಪಾದಕರಾಗಿ ದುಡಿದಿರುವ ಅನುಭವ ಗಳಿಸಿದ್ದಾರೆ. ಅವರು 1970ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ಎಸ್ಡಿಪಿ ಅಧ್ಯಕ್ಷ ಹಾಗೂ ಯುರೋಪಿಯನ್ ಯೂನಿಯನ್‌ನ ಸದಸ್ಯ ಕೂಡ ಆಗಿದ್ದರು. ಪೊರ್ಚುಗಲ್‌ನ ಸಂವಿಧಾನದಲ್ಲಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿಲ್ಲ. ಆದರೂ ಅಧ್ಯಕ್ಷರು ಸಂಸತ್ತನ್ನು ವಿಸರ್ಜಿಸುವ ಅಧಿಕಾರವನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News