ಬೆಳುವಾಯಿ ಸಿ.ಎ ಬ್ಯಾಂಕ್‌ನಿಂದ ವಿದ್ಯಾರ್ಥಿ ವೇತನ ವಿತರಣೆ
ಬೆಳುವಾಯಿ ಸಿ.ಎ ಬ್ಯಾಂಕ್‌ನಲ್ಲಿ ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಆಮ್ ಆದ್ಮಿ ಯೋಜನೆಯಡಿಯಲ್ಲಿ ಕೃಷಿಸಾಲ ಪಡೆದ ಸದಸ್ಯರ ಪೈಕಿ ಪ್ರತಿಶತ 15 ಜನ ರೈತ ಸದಸ್ಯರಲ್ಲಿ ಒಂಭತ್ತನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ. ತನಕ ವ್ಯಾಸಂಗ ಮಾಡುತ್ತಿರುವ 10 ಮಂದಿ ವಿದ್ಯಾರ್ಥಿಗಳಿಗೆ ತಲಾ ರೂಪಾಯಿ 1200 ದಂತೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಬೆಳುವಾಯಿ ಸಹಕಾರಿ ವ್ಯವಸಾಯಿಕ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ವಿದ್ಯಾರ್ಥಿಗಳ ಪೋಷಕರಿಗೆ ಚೆಕ್ ವಿತರಿಸಿ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಬ್ಯಾಂಕಿನಿಂದ ಆರ್ಥಿಕ ಸಹಾಯವನ್ನು ನೀಡುವ ಯೋಜನೆಯನ್ನು
ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು ಎಂದು ಹೇಳಿದರು. ಪಾಲಕರು ಒಳ್ಳೆಯ ಗುಣ ನಡತೆಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಬೇಕು. ಮಾನವೀಯ ಮೌಲ್ಯಗಳನ್ನು ತಿಳಿಸಬೇಕು. ಹೆತ್ತವರ ನಿರ್ಲಕ್ಷ್ಯಕ್ಕೊಳಗಾದ ಮಕ್ಕಳು ಅಡ್ಡದಾರಿ ತುಳಿಯುತ್ತಿದ್ದಾರೆ ಎಂದರು.
ಈಗಾಗಲೇ ನಮ್ಮ ಬ್ಯಾಂಕಿನಲ್ಲಿ ಸೋಲಾರ್ ಖರೀದಿ ಬಗ್ಗೆ ಶೇಕಡಾ 7ರ ಬಡ್ಡಿ ದರದಲ್ಲಿ ಬ್ಯಾಂಕಿನ ಸದಸ್ಯರಿಗೆ ಸಾಲವನ್ನು
ನೀಡುತ್ತಿದ್ದು ಸದಸ್ಯರಿಂದ ಉತ್ತಮವಾದ ಪ್ರತಿಕ್ರಿಯೆಗಳು ಬರುತ್ತಿದ್ದು ಸದಸ್ಯರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರು
ಸಂತಸವನ್ನು ವ್ಯಕ್ತಪಡಿಸಿದರು.