×
Ad

ಡೊನಾಲ್ಡ್ ಟ್ರಂಪ್ ಸಭೆಯಿಂದ ಹೊರದಬ್ಬಲ್ಪಟ್ಟ ಸಿಖ್

Update: 2016-01-25 20:30 IST

‘ದ್ವೇಷ ಪ್ರಸಾರವನ್ನು ನಿಲ್ಲಿಸಿ’ ಎಂಬ ಬರಹದ ಪತಾಕೆ ಪ್ರದರ್ಶಿಸಿದರು

ವಾಶಿಂಗ್ಟನ್, ಜ. 25: ‘ದ್ವೇಷ ಪ್ರಸಾರವನ್ನು ನಿಲ್ಲಿಸಿ’ ಎಂಬ ಒಕ್ಕಣೆಯ ಪತಾಕೆ ಪ್ರದರ್ಶಿಸಿದ ಮುಂಡಾಸುಧಾರಿ ಸಿಖ್ ವ್ಯಕ್ತಿಯೊಬ್ಬರನ್ನು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ರ ಸಭೆಯಿಂದ ಹೊರದಬ್ಬಿದ ಘಟನೆಯೊಂದು ನಡೆದಿದೆ.

ಅಮೆರಿಕದ ಅಯೋವ ರಾಜ್ಯದಲ್ಲಿ ರವಿವಾರ ನಡೆದ ರ್ಯಾಲಿಯಲ್ಲಿ ಟ್ರಂಪ್ ತನ್ನ ಪ್ರೀತಿಯ ಮುಸ್ಲಿಂ ವಿರೋಧಿ ಭಾಷಣ ಮಾಡುತ್ತಿದ್ದಾಗ ಕೆಂಪು ಮುಂಡಾಸು ಧರಿಸಿದ ವ್ಯಕ್ತಿ ಶಾಂತಿಯುತ ಪ್ರತಿಭಟನೆ ನಡೆಸಿದರು.

‘ದ್ವೇಷ ಪ್ರಸಾರವನ್ನು ನಿಲ್ಲಿಸಿ’ ಎಂಬ ಬರಹದ ಪತಾಕೆ ಪ್ರದರ್ಶಿಸಿದ ಸಿಖ್ ಪ್ರತಿಭಟನಕಾರ, ಟ್ರಂಪ್‌ರ ಭಾಷಣಕ್ಕೆ ಅಡಚಣೆ ಉಂಟು ಮಾಡಲು ಯತ್ನಿಸಿದರು. ಅವರನ್ನು ಕೂಡಲೇ ರ್ಯಾಲಿಯ ಸ್ಥಳದಿಂದ ಹೊರದಬ್ಬಲಾಯಿತು.

ನ್ಯೂಯಾರ್ಕ್‌ನಲ್ಲಿ ಅವಳಿ ಕಟ್ಟಡಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯ ಬಗ್ಗೆ ಟ್ರಂಪ್ ಮಾತನಾಡುತ್ತಿದ್ದಾಗ ಪ್ರತಿಭಟನೆ ಆರಂಭಗೊಂಡಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News