×
Ad

ಮಣಿಪಾಲ : ಅಂಗನವಾಡಿ ಕೇಂದ್ರದ ಎದುರು ಹೆತ್ತವರಿಂದ ಪ್ರತಿಭಟನೆ

Update: 2016-01-25 22:00 IST

ಮಣಿಪಾಲ, ಜ.25: ಇಲ್ಲಿನ ಆದರ್ಶ ನಗರ 2ರ ಅಂಗನವಾಡಿ ಕೇಂದ್ರದ ಸಹಾಯಕಿಯನ್ನು ಹಠಾತ್ತನೇ ವರ್ಗಾವಣೆಗೊಳಿಸಿರುವುದನ್ನು ವಿರೋದಿಸಿ ಮಕ್ಕಳ ಹೆತ್ತವರು ಇಂದು ಅಂಗನವಾಡಿ ಕೇಂದ್ರದ ಎದುರು ಧರಣಿ ಪ್ರತಿಭಟನೆ ನಡೆಸಿದರು.

ಸುಮಾರು 20ರಿಂದ 24 ಮಂದಿ ಮಕ್ಕಳಿರುವ ಆದರ್ಶನಗರ 2ನೇ ಅಂಗನವಾಡಿ ಕೇಂದ್ರ ಸಹಾಯಕಿ ಮಾಲಿನಿ ಅವರನ್ನು ಶಿಶು ಅಭಿವೃದ್ಧಿ ಯೋಜನಾಕಾರಿ ಯಾವುದೇ ಮುನ್ಸೂಚನೆ ದಿಢೀರ್ ಆಗಿ ಶಾಂತಿನಗರ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದಾರೆ. ಇದರಿಂದ ಅಂಗವಾಡಿ ಮಕ್ಕಳ ಪೋಷಕರಲ್ಲಿ ಗೊಂದಲ ಹುಟ್ಟಿಸಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದರು.

ಸೋಮವಾರ ಆದರ್ಶನಗರ 2ನೇ ಅಂಗನವಾಡಿ ಕೇಂದ್ರ ಸಮನ್ವಯ ಸಮಿತಿ ಹಾಗೂ ಈಶ್ವರನಗರ ವಾರ್ಡಿನ ನಾಗರಿಕರು ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.ಇನ್ನು ಕನಿಷ್ಠ 3 ತಿಂಗಳುಗಳ ಕಾಲ ಸಹಾಯಕಿ ಹುದ್ದೆಗೆ ಯಾವುದೇ ನೇಮಕಾತಿ ನಡೆಯುವುದಿಲ್ಲ. ಇಲ್ಲಿರುವ ಕಾರ್ಯಕರ್ತೆ ಒಬ್ಬರೆ 24 ಮಕ್ಕಳ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಇದು ಕಷ್ಟ ಸಾಧ್ಯ. ಇದರಿಂದ ಮಕ್ಕಳ ಹೆತ್ತವರು ಆತಂಕಗೊಂಡಿದ್ದಾರೆ. ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಕಾರಿ ಮತ್ತು ಮೇಲ್ವಿಚಾರಕಿ ಸಂಗೀತ ಅವರನ್ನು ಕಳೆದ ಜ.16ರಂದು ದೂರವಾಣಿ ಮೂಲಕ ವಿಚಾರಿಸಿದಾಗ ಸಹಾಯಕಿ ಮಾಲಿನ ಅವರನ್ನು ವರ್ಗಾವಣೆ ಮಾಡಿಲ್ಲ ಎಂದು ತಿಳಿಸಿದರೂ, ಕಳೆದ ಶನಿವಾರ ಜ.23ರಂದು ಮಾಲಿನಿ ಅವರು ಅಂಗನವಾಡಿ ಕಾರ್ಯಕರ್ತೆಯ ಕೈಯಲ್ಲಿ ವರ್ಗಾವಣೆ ಆದೇಶದ ಪ್ರತಿ ನೀಡಿ ಶಾಂತಿನಗರ ಅಂಗನವಾಡಿಗೆ ತೆರಳಿದ್ದಾರೆ ಎಂದು ಠಾಕೂರ್ ವಿವರಿಸಿದರು.

ಬಳಿಕ ಈ ಕುರಿತು ಮನವಿ ಪತ್ರವೊಂದನ್ನು ಜಿಲ್ಲಾಕಾರಿಯವರಿಗೆ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ಉಪೇಂದ್ರ ವಾಗ್ಳೆ, ನಾಗೇಶ್ ಸುಂದರ್, ಪತ್ರಕರ್ತ ಗಣೇಶ್‌ಪ್ರಸಾದ ಪಾಂಡೇಲು, ಅಂಗನವಾಡಿ ಕಾರ್ಯಕರ್ತೆ ಲಲಿತಾ ಎನ್. ಮುಂತಾದವರು ಉಪಸ್ಥಿತರಿದ್ದರು.                                                          

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News