×
Ad

ಮಣಿಪಾಲ : ಪೋರ್ಟ್ ಟ್ರಸ್ಟ್‌ಗೆ ಲೀಗ್ ಕ್ರಿಕೆಟ್ ಟ್ರೋಫಿ ಪೋರ್ಟ್ ಟ್ರಸ್ಟ್‌ಗೆ ಲೀಗ್ ಕ್ರಿಕೆಟ್ ಟ್ರೋಫಿ

Update: 2016-01-25 22:03 IST

ಮಣಿಪಾಲ, ಜ.25: ಮಣಿಪಾಲ ವಿವಿ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ಕೆಆರ್‌ಸಿಎ ಕಾರ್ಪೋರೇಟ್ ಲೀಗ್ ಲೆದರ್‌ಬಾಲ್‌ಕ್ರಿಕೆಟ್ ಟೂರ್ನಿಯನ್ನು ಪೋರ್ಟ್‌ಟ್ರಸ್ಟ್ ಆಫ್ ಇಂಡಿಯಾ (ಬಂದರು ಮಂಡಳಿ) ಗೆದ್ದುಕೊಂಡಿತು.
 
 ಮಣಿಪಾಲದ ವಿವಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೂರ್ನಿಯ ಂತಿಮ ಪಂದ್ಯದಲ್ಲಿ ಬೆಂಗಳೂರಿನ ಯೂನಿಸಿಸ್ ತಂಡವನ್ನು 56 ರನ್‌ಗಳ ಅಂತರದಿಂದ ಸುಲಭವಾಗಿ ಸೋಲಿಸಿದ ಭಾರತ ಮಂಳಿ ತಂಡ ಮಿರುಗುವ ಟ್ರೋಫಿಯೊಂದಿಗೆ ಒಂದು ಲಕ್ಷ ರೂ. ನಗದು ಬಹುಮಾನ ಗೆದ್ದುಕೊಂಡಿತು. ಪರಾಜಿತ ಯೂನಿಸಿಸ್ ತಂಡ ಪ್ರಶಸ್ತಿಯೊಂದಿಗೆ 50,000ರೂ. ನಗದು ಬಹುಮಾನ ಪಡೆಯಿತು. ಮಣಿಪಾಲದ ವಿವಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೂರ್ನಿಯ ಂತಿಮ ಪಂದ್ಯದಲ್ಲಿ ಬೆಂಗಳೂರಿನ ಯೂನಿಸಿಸ್ ತಂಡವನ್ನು 56 ರನ್‌ಗಳ ಅಂತರದಿಂದ ಸುಲವಾಗಿಸೋಲಿಸಿದಾರತ ಮಂಳಿ ತಂಡ ಮಿರುಗುವ ಟ್ರೋಫಿಯೊಂದಿಗೆ ಒಂದು ಲಕ್ಷ ರೂ. ನಗದು ಬಹುಮಾನ ಗೆದ್ದುಕೊಂಡಿತು. ಪರಾಜಿತ ಯೂನಿಸಿಸ್ ತಂಡ ಪ್ರಶಸ್ತಿಯೊಂದಿಗೆ 50,000ರೂ. ನಗದು ಬಹುಮಾನ ಪಡೆಯಿತು. ಮೊದಲು ಬ್ಯಾಟಿಂಗ್ ನಡೆಸಿದ ಬಂದರು ಮಂಡಳಿ ತಂಡ ಧೀರಜ್ (44), ಹೇಮಲ್ ವಟೇಕರ್ (20) ಇವರ ಉತ್ತಮ ಬ್ಯಾಟಿಂಗ್ ನೆರವಿನಿಂದ 17.2 ಓವರುಗಳಲ್ಲಿ 119 ರನ್ ಗಳಿಸಿ ಆಲೌಟಾಯಿತು. ಯೂನಿಸಿಸ್ ತಂಡದ ನಾಯಕ ಕೀರ್ತಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ ಕೇವಲ 8 ರನ್ ಗಳಿಗೆ 5 ವಿಕೆಟ್ ಪಡೆದರೆ, ಹರೀಶ್ 26 ರನ್‌ಗೆ 2 ವಿಕೆಟ್ ಗಳಿಸಿದರು.

 ಬಳಿಕ ಅತ್ಯುತ್ತಮ ಬೌಲಿಂಗ್ ಮತ್ತು ಪೀಲ್ಡಿಂಗ್ ಪ್ರದರ್ಶನ ನೀಡಿದ ಬಂದರು ಮಂಡಲಿ 17ನೆ ಓವರಿನಲ್ಲಿ 63 ರನ್‌ಗಳಿಗೆ ಯುನಿಸಿಸ್‌ನ್ನು ಆಲೌಟ್ ಮಾಡಿತು. ಹರೀಶ್ (19), ಸಂತೋಷ್ (14) ಮಾತ್ರ ಎರಡಂಕೆ ಮೊತ್ತ ಗಳಿಸಿದರು. ಕೇವಲ 13 ರನ್‌ಗಳಿಗೆ 5 ವಿಕೆಟ್ ಪಡೆದ ಯೋಗೀಶ್ ವಿಜಯ ಶಿಲ್ಪಿಯೆನಿಸಿ ಪಂದ್ಯಶ್ರೇಷ್ಠ ಪುರಸ್ಕಾರ ಪಡೆದರು. ಬಳಿಕ ಅತ್ಯುತ್ತಮ ಬೌಲಿಂಗ್ ಮತ್ತು ಪೀಲ್ಡಿಂಗ್ ಪ್ರದರ್ಶನ ನೀಡಿದ ಬಂದರು ಮಂಡಲಿ 17ನೆ ಓವರಿನಲ್ಲಿ 63 ರನ್‌ಗಳಿಗೆ ಯುನಿಸಿಸ್‌ನ್ನು ಆಲೌಟ್ ಮಾಡಿತು. ಹರೀಶ್ (19), ಸಂತೋಷ್ (14) ಮಾತ್ರ ಎರಡಂಕೆ ಮೊತ್ತ ಗಳಿಸಿದರು. ಕೇವಲ 13 ರನ್‌ಗಳಿಗೆ 5 ವಿಕೆಟ್ ಪಡೆದ ಯೋಗೀಶ್ ವಿಜಯ ಶಿಲ್ಪಿಯೆನಿಸಿ ಪಂದ್ಯಶ್ರೇಷ್ಠ ಪುರಸ್ಕಾರ ಪಡೆದರು. ಸರಣಿಯುದ್ದಕ್ಕೂ ಅತ್ಯುತ್ತಮ ಸರ್ವಾಂಗೀಣ ಪ್ರದರ್ಶನ ನೀಡಿದ ಬಂದರು ತಂಡದ ನಾಯಕ, ಆಂದ್ರ ಪ್ರದೇಶ ರಣಜಿ ತಂಡದ ಆಟಗಾರ ಹೇಮಲ್ ವಟೇಕರ್ ಸರಣಿ ಶ್ರೇಷ್ಠ ಗೌರವವನ್ನು ಪಡೆದರು. ಯೂನಿಸಿಸ್ ತಂಡದ ಹರೀಶ್ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದರು.
ಇದಕ್ಕೆ ಮುನ್ನ ಸೆಮಿಫೈನಲ್ ಪಂದ್ಯಗಳಲ್ಲಿ ಬಂದರು ಮಂಡಳಿ, ಬೆಂಗಳೂರಿನ ಹೆಲ್ವರ್ಟ್ ಪೆಕಾರ್ಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಹಾಗೂ ಯೂನಿಸಿಸ್ ತಂಡ, ಟೈಟಾನ್ ತಂಡದ ವಿರುದ್ಧ 5 ವಿಕೆಟ್‌ಗಳ ಜಯ ಪಡೆದು ಫೈನಲ್ ಪ್ರವೇಶಿಸಿದ್ದವು.
 ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಬಹುಮಾನ ವಿತರಿಸಿದರು. ಕೆಆರ್‌ಸಿಎ ಸಂಚಾಲಕ ಇಮ್ತಿಯಾಝ, ಉದ್ಯಮಿ ಗಣೇಶ್ ಶೆಟ್ಟಿ, ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣಪ್ರಸಾದ್, ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ, ರಂಜಿತ್ ಸಾಲಿಯಾನ್, ಕ್ರಿಕೆಟ್ ಆಟಗಾರ ಪ್ರಕಾಶ್ ಕರ್ಕೆರಾ ಮುಂತಾದವರು ಉಪಸ್ಥಿತರಿದ್ದರು. ಗುರುಪ್ರಸಾದ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News