ಕುಂದಾಪುರ : ಮೂಳೆ ಕ್ಯಾನ್ಸರ್ ಪೀಡಿತ ಬಾಲಕನಿಗೆ ಚಿಕಿತ್ಸೆಗೆ ನೆರವಾಗುವಂತೆ ಕೋರಿಕೆ
ಕುಂದಾಪುರ, ಜ.24: ಮೂಳೆ ಕ್ಯಾನ್ಸರ್‌ಗೆ ತುತ್ತಾಗಿರುವ ಕುಂದಾಪುರ ಕೋಡಿಯ ಅಬ್ದುಲ್ ಖಾದರ್ ಜೀಲಾನಿ ಎಂಬವರ ಮಗ ಮುಹಮ್ಮದ್ ಮುಜೀಬ್(15) ಎಂಬಾತನ ಚಿಕಿತ್ಸೆಗೆ ನೆರವಾಗುವಂತೆ ಕೋರಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಕಷ್ಟದ ಬದುಕು ಸಾಗಿಸುತ್ತಿರುವ ಅಬ್ದುಲ್ ಖಾದರ್ ಜೀಲಾನಿ ಕುಟುಂಬ ಮಗನ ಅನಾರೋಗ್ಯದಿಂದ ದಿಕ್ಕು ತೋಚ ದಂತಾಗಿದೆ. ಇವರ ಮಗ ಮೂಳೆ ಕ್ಯಾನ್ಸರ್ ಸಂಬಂತ ಕಾಯಿಲೆಯಿಂದ ಬಳಲುತ್ತಿದ್ದು, ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ.
ಮಣಿಪಾಲ ಕೆಎಂಸಿಯ ಶಿರಡಿ ಸಾಯಿಬಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿರುವ ಮುಜೀಬ್‌ನ ಚಿಕಿತ್ಸೆಗೆ ಸುಮಾರು 3ಲಕ್ಷ ರೂ. ವೆಚ್ಚವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈವರೆಗೆ ಮುಜೀಬ್‌ನ ಚಿಕಿತ್ಸೆಗಾಗಿ ಸಾಲ ಮಾಡಿ 2.50ಲಕ್ಷ ರೂ. ಖರ್ಚು ಮಾಡಲಾಗಿದೆ. ಇನ್ನು ಕೂಡ 6ಲಕ್ಷ ರೂ. ಖರ್ಚು ಬರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಮಗನ ಚಿಕಿತ್ಸೆಗಾಗಿ ಈಗಾಗಲೇ ಸಾಕಷ್ಟು ವ್ಯಯ ಮಾಡಿರುವ ಕುಟುಂಬ ಆರ್ಥಿಕ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿದೆ. ಆದುದರಿಂದ ದಾನಿಗಳು ಈ ಕುಟುಂಬದ ಮಗನ ಚಿಕಿತ್ಸೆ ನೆರವು ನೀಡುವಂತೆ ಮನವಿ ಮಾಡಲಾಗಿದೆ. ವಿಳಾಸ: ಅಬ್ದುಲ್ ಖಾದರ್ ಜೀಲಾನಿ, ನಂ.42ಬಿ, 7ನೆ ವಾರ್ಡ್, ಎಂ. ಕೋಡಿ, ಕೋಡಿ ಅಂಚೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ. ಮೊಬೈಲ್ - 9740070148. ಅಕೌಂಟ್ ನಂಬರ್: ಅಬ್ದುಲ್ ಖಾದರ್ ಜೀಲಾನಿ, ಎಸ್‌ಬಿ ಅಕೌಂಟ್ ನಂಬ್ರ- 1402500102063201, ಕರ್ಣಾಟಕ ಬ್ಯಾಂಕ್, ಕುಂದಾಪುರ ಶಾಖೆ.