×
Ad

ಉಡುಪಿ : ಎಸ್‌ಎಂಎ ಪದಾಕಾರಿಗಳ ಆಯ್ಕೆ

Update: 2016-01-25 23:00 IST

ಎಸ್‌ಎಂಎ ಪದಾಕಾರಿಗಳ ಆಯ್ಕೆ
ಉಡುಪಿ, ಜ.25: ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಶನ್ ಉಡುಪಿ ರೇಂಜ್‌ನ ಮಹಾಸಭೆಯು ಎಸ್‌ಜಿಎಂ ಉಡುಪಿ ರೇಂಜ್ ಅಧ್ಯಕ್ಷ ಅಲ್ ಹಾಜ್ ಬಶೀರ್ ಮದನಿ ಕಟಪಾಡಿ ಅಧ್ಯಕ್ಷತೆಯಲ್ಲಿ ಉಡುಪಿ ಅಜ್ಜರಕಾಡು ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
 ಮುತ್ತಿಷ್ ಹಾಫಿಳ್ ಹನೀಫ್ ಮಿಸ್ಜಾಹಿ ಸಭೆಯನ್ನು ಉದ್ಘಾಟಿಸಿದರು. ರೇಂಜ್ ಕಾರ್ಯದರ್ಶಿ ಅಲ್‌ಹಾಜ್ ಹನೀಫ್ ಮದನಿ ಸಂತೋಷನಗರ ಸ್ವಾಗತಿಸಿದರು. ಅಚ್ಚಡ ಹಕೀಂ ಸಖಾಫಿ ಖಿರಾಅತ್ ಪಠಿಸಿದರು. ಕರ್ನಾಟಕ ರಾಜ್ಯ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಆತೂರು ಸಅದ್ ಮುಸ್ಲಿ ಯಾರ್ ವಿಷಯ ಮಂಡಿಸಿದರು. ಈ ಸಂದರ್ಭದಲ್ಲಿ ಪದಾಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ರಾಗಿ ಕೆ.ಪಿ.ಮೊದಿನ್ ದೊಡ್ಡಣಗುಡ್ಡೆ, ಉಪಾಧ್ಯಕ್ಷರಾಗಿ ಆರ್ಿ ಮಣಿಪಾಲ, ಖಾಸಿಂ ಬಾರ್ಕೂರು, ಉಸ್ಮಾನ್ ಮದನಿ ನೇಜಾರು, ಫೈಝಲ್ ಸಂತೋಷ ನಗರ, ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಮಿಸ್ಬಾಹಿ ಹೂಡೆ, ಕಾರ್ಯ ದರ್ಶಿಗಳಾಗಿ ರಫೀಕ್ ಪುತ್ತಿಗೆ, ಹಬೀಬುಲ್ಲಾ ನೇಜಾರು, ಕೋಶಾಕಾರಿಯಾಗಿಉಮರಬ್ಬ ಪುತ್ತಿಗೆ ಹಾಗೂ ಎಲ್ಲಾ ಸದರ್ ಅಧ್ಯಾಪಕರನ್ನು ಕಾರ್ಯಕಾರಿ ಸಭೆಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News