×
Ad

ಅಂಡರ್-19 ವಿಶ್ವಕಪ್ ಅಭ್ಯಾಸ ಪಂದ್ಯ: ಪಾಕ್ ವಿರುದ್ಧ ಭಾರತಕ್ಕೆ ಜಯ

Update: 2016-01-25 23:04 IST

ಢಾಕಾ, ಜ.25: ಎಡಗೈ ವೇಗಿ ಖಲೀಲ್ ಅಹ್ಮದ್‌ರ ಅಮೋಘ ಬೌಲಿಂಗ್ ಹಾಗೂ ಸರ್ಫ್‌ರಾಝ್ ಖಾನ್‌ರ ಮಿಂಚಿನ 81 ರನ್ ನೆರವಿನಿಂದ ಭಾರತ ತಂಡ ಅಂಡರ್-19 ವಿಶ್ವಕಪ್‌ನ ಕೊನೆಯ ಅಭ್ಯಾಸ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿದೆ.

ಸೋಮವಾರ ಇಲ್ಲಿ ಪಂದ್ಯ ವಿಳಂಬವಾಗಿ ಆರಂಭವಾದ ಕಾರಣ ಪಂದ್ಯವನ್ನು 45 ಓವರ್‌ಗೆ ಸೀಮಿತಗೊಳಿಸಲಾಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಎಡಗೈ ವೇಗದ ಬೌಲರ್ ಅಹ್ಮದ್(5-30) ದಾಳಿಗೆ ತತ್ತರಿಸಿ 44.1 ಓವರ್‌ಗಳಲ್ಲಿ 197 ರನ್‌ಗೆ ಆಲೌಟಾಯಿತು. ಒಂದು ಹಂತದಲ್ಲಿ 1 ವಿಕೆಟ್‌ಗೆ 75 ರನ್ ಗಳಿಸಿದ್ದ ಪಾಕ್ ಅಹ್ಮದ್ ದಾಳಿಗೆ ತತ್ತರಿಸಿ 122 ರನ್‌ಗೆ ಕೊನೆಯ 9 ವಿಕೆಟ್ ಕಳೆದುಕೊಂಡಿತು.

ಗೆಲ್ಲಲು 198 ರನ್ ಗುರಿ ಪಡೆದಿದ್ದ ಭಾರತಕ್ಕೆ ಬಿಗ್ ಹಿಟ್ಟರ್ ಸರ್ಫ್‌ರಾಝ್(81 ರನ್, 68 ಎಸೆತ, 12 ಬೌಂಡರಿ, 1 ಸಿಕ್ಸರ್) ಆಧಾರವಾದರು. ಭಾರತ 34ನೆ ಓವರ್‌ಗೆ ಗೆಲುವಿನ ದಡ ಸೇರಿತು.

ಮೂರು ಬಾರಿಯ ಚಾಂಪಿಯನ್ ಭಾರತ ಜ.28 ರಂದು ಡಿ ಗುಂಪಿನಲ್ಲಿ ಐರ್ಲೆಂಡ್ ವಿರುದ್ಧ ಆಡುವ ಮೂಲಕ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News