ಗಣರಾಜ್ಯೊತ್ಸವ ಕಸರತ್ತಿನಲ್ಲಿ ಮೋಟಾರು ಸೈಕಲ್ ಸವಾರರಿಗೆ ಗಾಯ
Update: 2016-01-26 16:43 IST
ಬಿಕನೇರ್: ರಾಜಸ್ತಾನದ ಬಿಕನೇರ್ ನಗರದಲ್ಲಿ ಆಯೋಜಲಾಗಿಸಿದ್ದ ರಾಜ್ಯ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಮೋಟಾರು ಸೈಕಲ್ ಕಸರತ್ತು ನಡೆಸುತ್ತಿದ್ದಾಗ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೊಲೀಸರು ಗಾಯಗೊಂಡ ಘಟನೆ ವರದಿಯಾಗಿದೆ.
ಗಾಯಗೊಂಡವರನ್ನು ರಾಜಸ್ಥಾನ ಪೊಲೀಸ್‌ನ ದಯಾಸಿಂಗ್ ಮತ್ತು ಚೈನ್‌ರಾಮ್ ಸಿಂಗ್ ಎಂದು ಗುರುತಿಸಲಾಗಿದೆ. ಮೋಟಾರು ಸೈಕಲ್‌ನಲ್ಲಿ ಅವರು ಗುಂಪು ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಈ ಘಟನೆಯ ನಂತರ ಮೋಟಾರು ಸೈಕಲ್ ಕಸರತ್ತನ್ನು ಸ್ಥಗಿತಗೊಳಿಸಿದ್ದು ವೀಕ್ಷರಲ್ಲಿ ನಿರಾಸೆಗೆ ಕಾರಣವಾಯಿತು ಎಂದು ವರದಿಯಾಗಿದೆ.