×
Ad

ದಲಿತರನ್ನು ಕೊಲೆಮಾಡುವ ರಾಷ್ಟದಲ್ಲಿ ಗಣರಾಜ್ಯೋತ್ಸವ ಯಾಕೆ : ಜಯನ್ ಮಲ್ಪೆ

Update: 2016-01-26 16:47 IST

ಕುಂದಾಪುರ : ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದಲಿತರ ಮೇಲಿನ ಕೊಲೆ,ದೌರ್ಜನ್ಯಗಳು ಹೆಚ್ಚುತ್ತಿರುವುದರಿಂದ ಈ ದೇಶದಲ್ಲಿ ಗಣರಾಜ್ಯೋತ್ಸವ ಯಾಕೆ ? ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರಶ್ನಿಸಿದ್ದಾರೆ.


     ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ ವೇಮುಲರ ಸಾವಿಗೆ ಕಾರಣರಾದ ವಿ.ವಿ.ಕುಲಪತಿ,ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ,ಸ್ಮತಿ ಇರಾನಿ.ಮತ್ತು ಎಬಿವಿಪಿ ನಾಯಕರನ್ನು ಬಂಧಿಸುವಂತ್ತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕುಂದಾಪುರ ಶಾಖೆ ಶಾಸ್ತಿ ಪಾರ್ಕ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡುತ್ತಾ, ಮೋದಿಯ ಡಿಜಿಟಲ್ ಇಂಡಿಯಾದಲ್ಲಿ ದಲಿತರ ಮೇಲೆ ಸಂಘ ಪರಿವಾರ ಪ್ರತಿನಿತ್ಯ ದೌರ್ಜನ್ಯ ಎಸಗುತ್ತಿದ್ದು,ಈ ದೇಶದಲ್ಲಿ ದಲಿತರು ರಾಜಕೀಯ ಶಕ್ತಿಯಾಗುವುದನ್ನು ನಿರ್ನಾಮ ಮಾಡಲು ಯತ್ನಿಸುತ್ತಿದ್ದಾರೆ ಎಂದ ಜಯನ್ ಮಲ್ಪೆ,ಸಂವಿಧಾನವನ್ನು ಧಿಕ್ಕರಿಸಿ ಮನುಸ್ಮತಿಯನ್ನು ಎತ್ತಿಹಿಡಿಯಲು,ತ್ರಿವರ್ಣ ಧ್ವಜವನ್ನು ತಿರಸ್ಕರಿಸಿ ಭಗವಾಧ್ವಜವನ್ನು ಜಾರಿಗೆ ತರುವ ಮೂಲಕ ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾಶಮಾಡಲು ಹುನ್ನಾರನಡೆಸುತ್ತಿದ್ದಾರೆ ಎಂದರು.


     ಪತ್ರಕರ್ತ ಜಾನ್ ಡಿಸೋಜ ಮಾತನಾಡಿ ದಲಿತ ಸಂಶೋಧಕ ರೋಹಿತ್ ವೇಮುಲರ ಸಾವಿಗೆ ಕಾರಣರಾದವರನ್ನು ಶಿಕ್ಷೆಗೆ ಒಳಪಡಿಸಬೇಕೆಂದರು,ಪ್ರಗತಿಪರ ಚಿಂತಕ ಶಶಿಧರ ಹೆಮ್ಮಾಡಿಯವರು ಈ ದೇಶದಲ್ಲಿ ದಲಿತರು ಎಚ್ಚೆತ್ತುಕೊಂಡಾಗೆಲ್ಲ ಅವರನ್ನು ದೇಶದ್ರೋಹಿಗಳು,ಭಯೋತ್ಪಾದಕರು ಎಂಬ ಪಟ್ಟಕಟ್ಟುತ್ತಾರೆ.ಆದರೆ ನರೇಂದ್ರ ಮೋಧಿ ಮಾತ್ರ ತಿಂಗಳಿಗೆ ನಾಲ್ಕೂಬಾರಿ ಪಕಿಸ್ಥಾನಕ್ಕೆ ಬೇಟಿನೀಡುತ್ತಾರೆ ಎಂದರು.


     ಮಂಜುನಾಥ ಗಿಳಿಯಾರು,ಸಂಜೀವ ಬಳ್ಕೂರು,ಪ್ರಧಾನ ಸಂಚಾಲಕ ಶ್ಯಾಮ್‌ರಾಜ್ ಭಿರ್ತಿ,ವಾಸುದೇವ ಮುದ್ದೂರು,ರಾಜು ಬೇಟ್ಟಿನಮನೆ,ಸುಂದರ ಕಪ್ಪೆಟ್ಟು,ವಿಠಲತೊಟಂ,ಎನ್.ಎ ನೇಜಾರು,ಕುಮಾರ್ ಕೋಟಾ,ಮುಂತ್ತಾದವರು ಬಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News