×
Ad

ತೆಲಂಗಾಣ:ಶೌಚಾಲಯವಿಲ್ಲದ ಕೊರಗು ಹದಿಹರೆಯದ ಬಾಲಕಿ ಆತ್ಮಹತ್ಯೆ

Update: 2016-01-26 17:53 IST

ನಲ್ಗೊಂಡಾ,ಜ.26: ಮನೆಯಲ್ಲಿ ಶೌಚಾಲಯವೊಂದನ್ನು ಕಟ್ಟಿಸುವಂತೆ ಹೆತ್ತವರ ಮನವೊಲಿಸುವಲ್ಲಿ ವಿಫಲಗೊಂಡ 17ರ ಹರೆಯದ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.


ಗುಂಡಾಲಾ ಉಪವಿಭಾಗದ ಪದವಿಪೂರ್ವ ಕಾಲೇಜೊಂದರಲ್ಲಿ ಓದುತ್ತಿದ್ದ ಕಡಪರ್ತಿ ರೇಖಾ ಮಂಗಳವಾರ ತಡರಾತ್ರಿ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಯಲು ಶೌಚಾಲಯವನ್ನು ಬಳಸಬೇಕಾದ ಮತ್ತು ಗೋಣಿಚೀಲಗಳಿಂದ ನಿರ್ಮಿಸಲಾದ ಬಚ್ಚಲಿನಲ್ಲಿ ಸ್ನಾನ ಮಾಡಬೇಕಾದ ಸ್ಥಿತಿಯಿಂದ ಬಾಲಕಿ ತೀವ್ರ ಮುಜುಗರಕ್ಕೊಳಗಾಗಿದ್ದಳು ಎನ್ನಲಾಗಿದೆ.


ಬಾಲಕಿಯ ಹೆತ್ತವರಾದ ಸತ್ತಿಯಾ ಮತ್ತು ನಾಗಮ್ಮ ಕೃಷಿ ಕೂಲಿಕಾರ್ಮಿಕರಾಗಿದ್ದು, ಶೌಚಾಲಯ ನಿರ್ಮಿಸುವಷ್ಟು ಆರ್ಥಿಕ ಶಕ್ತಿ ಅವರಿಗಿಲ್ಲ.


ರೇಖಾಳ ಮೇಲೆ ಯಾರಾದರೂ ಕಣ್ಣಿಟ್ಟಿದ್ದರೇ ಅಥವಾ ಚುಡಾಯಿಸುತ್ತಿದ್ದರೇ ಮತ್ತು ಅದೇ ಕಾರಣಕ್ಕಾಗಿ ಅಕೆ ಖಾಸಗಿತನ ಮತ್ತು ಸುರಕ್ಷತೆಗಾಗಿ ಹಂಬಲಿಸುತ್ತಿದ್ದಳೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News