×
Ad

ರೆಂಜಾಳ ಬ್ರಹ್ಮಕಲಶೋತ್ಸವ ಆರಂಭ ಹರಿದು ಬಂದ ಹಸಿರು ಕಾಣಿಕೆ

Update: 2016-01-26 18:44 IST

ಸುಳ್ಯ: ರೆಂಜಾಳ ಶ್ರೀಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಮಂಗಳವಾರ ಹಸಿರುವಾಣಿ ಕಾಣಿಕೆ ಸಮರ್ಪಿಸಲಾಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲಿಂಗಪ್ಪ ನಾಯ್ಕ ತೋಟಚಾವಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಪಿಲಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಶಾಸ್ತ್ರಿ ದೋಳ, ಸೇವಾ ಸಮಿತಿ ಅಧ್ಯಕ್ಷ ಬಾಣೂರು ಪುಟ್ಟಣ್ಣ ಗೌಡ, ಶಿವಪಂಚಾಕ್ಷರಿ ಭಜನಾ ಮಂಡಳಿ ಅಧ್ಯಕ್ಷ ಸವಿನ್ ಕೊಡಪಾಲ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಸ್ವಯಂ ಸೇವಕರಿಗೆ ಶಾಲು ವಿತರಣೆ ನಡೆಯಿತು.

ಬೊಮ್ಮಾರು, ಕೊರತ್ತೋಡಿ, ದಾಸರಬೈಲು ಕಡೆಯಿಂದ ಏಕಕಾಲದಲ್ಲಿ ಹೊರಟ ಹಸಿರುವಾಣಿ ಮೆರವಣಿಗೆ ದೇವಸ್ಥಾನದಲ್ಲಿ ಸಮಾಗಮವಾಯಿತು. ಬಳಿಕ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News