×
Ad

ಆದಾಯ ತೆರಿಗೆ ರಿಟರ್ನ್‌ಗಳ ಸಲ್ಲಿಕೆಗೆ ನೂತನ ಸಾಫ್ಟ್‌ವೇರ್

Update: 2016-01-26 18:48 IST

ಹೊಸದಿಲ್ಲಿ,ಜ.26: ಡಿಜಿಟಲ್ ಸಹಿಗಳೊಂದಿಗೆ ಆದಾಯ ತೆರಿಗೆ(ಐಟಿ) ರಿಟರ್ನ್‌ಗಳ ಸಲ್ಲಿಕೆಯಲ್ಲಿ ಸಮಸ್ಯೆಗಳ ಬಗ್ಗೆ ತೆರಿಗೆದಾತರು ದೂರಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯು ಬಳಸಲು ಸುಲಭವಾಗಿರುವ ನೂತನ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿಗೊಳಿಸಿದೆ. ತಮ್ಮ ಐಟಿ ರಿಟರ್ನ್‌ಗಳ ಅಪ್‌ಲೋಡ್ ಸಂದರ್ಭದಲ್ಲಿ ಡಿಜಿಟಲ್ ಸಹಿ ಪ್ರಮಾಣಪತ್ರ(ಡಿಎಸ್‌ಸಿ)ವನ್ನು ಬಳಸುವಾಗ ಸಮಸ್ಯೆಗಳು ಎದುರಾಗುತ್ತಿವೆ ಎಂದು ತೆರಿಗೆದಾತರು ಇತ್ತೀಚಿಗೆ ದೂರಿಕೊಂಡಿದ್ದರು.

ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಬಳಸಲಾಗಿದ್ದ ಜಾವಾ ಆ್ಯಪ್ಲೆಟ್ ಗೂಗಲ್ ಕ್ರೋಮ್,ಮೊಝಿಲ್ಲಾ ಅಥವಾ ಇಂಟರ್‌ನೆಟ್ ಎಕ್ಸಪ್ಲೋರರ್‌ಗಳ ಇತ್ತೀಚಿನ ಆವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲವಾದ್ದರಿಂದ ಈ ಸಮಸ್ಯೆ ತಲೆದೋರಿತ್ತು. ಈ ಸಮಸ್ಯೆಯನ್ನು ನಿವಾರಿಸಲು ಮತ್ತು ಡಿಎಸ್‌ಸಿಗಳೊಂದಿಗೆ ಐಟಿ ರಿಟರ್ನ್ ಅಪ್‌ಲೋಡ್ ಪ್ರಕ್ರಿಯೆಯನ್ನು ಸರಳಗೊಳಿಸಲು ನೂತನ ಸಾಫ್ಟ್‌ವೇರ್‌ನ್ನು ಅಭಿವೃದ್ಧಿಗೊಳಿಸಲಾಗಿದೆ. ಇದನ್ನು ತೆರಿಗೆದಾತರು ತಮ್ಮ ಕಂಪ್ಯೂಟರ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡು ಡಿಎಸ್‌ಸಿಯನ್ನು ಬಳಸಿಕೊಂಡು ಸಹಿ ಮಾಡಬಹುದಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

 ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಭತ್ತು ತಿಂಗಳುಗಳಲ್ಲಿ ಐಟಿ ರಿಟರ್ನ್‌ಗಳ ಈ-ಫೈಲಿಂಗ್‌ನಲ್ಲಿ ಶೇ.27.22ರಷ್ಟು ಏರಿಕೆ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News