×
Ad

ಗಣರಾಜ್ಯೋತ್ಸವ:ಭಾರತ,ಪಾಕ್ ಯೋಧರಿಂದ ಸಿಹಿ ವಿನಿಮಯ

Update: 2016-01-26 19:04 IST

ಶ್ರೀನಗರ,ಜ.26: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದಲ್ಲಿ ನಿಯಂತ್ರಣ ರೇಖೆ(ಎಲ್‌ಒಸಿ)ಯಲ್ಲಿ ನಿಯೋಜಿತ ಭಾರತೀಯ ಮತ್ತು ಪಾಕಿಸ್ತಾನಿ ಯೋಧರು ಮಂಗಳವಾರ ಸಿಹಿಗಳನ್ನು ವಿನಿಮಯ ಮಾಡಿಕೊಂಡರು.

ಉಡಿ ವಿಭಾಗದ ಕಮಾನ್ ಮತ್ತು ತಂಗಧರ್ ವಿಭಾಗದ ಟೀಟ್ವಾಲ್ ಮುಂಚೂಣಿ ನೆಲೆಗಳಲ್ಲಿ ಈ ಸಿಹಿ ವಿನಿಮಯ ಕಾರ್ಯಕ್ರಮಗಳು ನಡೆದವು ಎಂದು ರಕ್ಷಣಾ ಮೂಲಗಳು ತಿಳಿಸಿದವು.

ಕದನ ವಿರಾಮ ಉಲ್ಲಂಘನೆಗಳು ಮತ್ತು ಗಡಿಯಾಚೆಯಿಂದ ನುಸುಳುವಿಕೆ ಪ್ರಯತ್ನಗಳ ಹೊರತಾಗಿಯೂ ಉಭಯ ರಾಷ್ಟ್ರಗಳ ರಾಷ್ಟ್ರೀಯ ಮಹತ್ವದ ದಿನಗಳಂದು ಎಲ್‌ಒಸಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನಾ ಸಿಬ್ಬಂದಿಗಳ ನಡುವೆ ಸಿಹಿ ವಿನಿಮಯ ನಿಯಮಿತ ಕಾರ್ಯಕ್ರಮವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News