ಕುಂದಾಪುರ : ರೋಹಿತ್ ಆತ್ಮಹತ್ಯೆ: ಕ್ರಮಕ್ಕೆ ಆಗ್ರಹಿಸಿ ಧರಣಿ
Update: 2016-01-26 19:13 IST
ಕುಂದಾಪುರ, ಜ.26: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆಗೆ ಕಾರಣರಾದವರನ್ನು ಶೀಘ್ರ ಬಂಸುವಂತೆ ಒತ್ತಾಯಿಸಿ ಡಿವೈಎ್ಐ ಮತ್ತು ಎಸ್‌ಎ್ಐ ಕಾರ್ಯ ಕರ್ತರು ಕುಂದಾಪುರದ ಶಾಸಿ ವೃತ್ತದಲ್ಲಿ ಇಂದು ಧರಣಿ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎ್ಐ ತಾಲೂಕು ಕಾರ್ಯದರ್ಶಿ ರಾಜೇಶ ವಡೇರಹೋಬಳಿ, ರೋಹಿತ್ ವೇಮುಲ ಆತ್ಮಹತ್ಯೆಗೆ ವಿವಿಯ ಪ್ರಚೋದನೆಯೆ ಕಾರಣ. ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ ಹಿಂದಿನಿಂದಲೂ ನಡೆಯುತ್ತ ಬಂದಿದೆ. ವಿದ್ಯಾಕೇಂದ್ರವು ಪ್ರಜೆಗಳನ್ನು ಸೃಷ್ಠಿ ಮಾಡುವ ಕೇಂದ್ರ ವಾಗಬೇಕೆ ಹೊರತು ಕೊಲೆ ಮತ್ತು ಸುಲಿಗೆ ಮಾಡುವ ಸಂಸ್ಥೆಯಾಗಿ ಅಲ್ಲ ಎಂದರು. ಈ ಸಂದರ್ಭದಲ್ಲಿ ಡಿವೈಎ್ಐನ ಸಂತೋಷ ಹೆಮ್ಮಾಡಿ, ರಾಜಾ ಬಿ.ಟಿ. ಆರ್., ರವಿ ವಿ.ಎಂ., ಸತೀಶ್ ತೆಕ್ಕಟ್ಟೆ, ಸತೀಶ್ ಲಾಡು, ಮಂಜುನಾಥ ಶೋಗನ್, ಎಸ್‌ಎ್ಐನ ಅಕ್ಷಯ್ ವಡೇರಹೋಬಳಿ ಉಪಸ್ಥಿತರಿದ್ದರು.