×
Ad

ಉಡುಪಿಯ ಬಯಲು ರಂಗಮಂದಿರ ಉದ್ಘಾಟನೆ

Update: 2016-01-26 19:56 IST

ಉಡುಪಿ, ಜ.26: ಉಡುಪಿ ನಗರಸಭೆ ಬೀಡಿನಗುಡ್ಡೆಯಲ್ಲಿ ಅಭಿವೃದ್ಧಿ ಪಡಿಸಿದ ಸುಮಾರು 3.5 ಎಕರೆ ಜಾಗದಲ್ಲಿ ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಬಯಲು ರಂಗಮಂದಿರವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅವರು ಇಂದು ಉದ್ಘಾಟಿಸಿದರು.


ಈ ಮೂಲಕ ಉಡುಪಿಯಲ್ಲಿ ಸಾರ್ವಜನಿಕ ಸಮಾರಂಭಗಳನ್ನು ನಡೆಸಲು ಬಹುಕಾಲದಿಂದ ಇದ್ದ ಮೈದಾನದ ಕೊರತೆಯನ್ನು ತುಂಬಲಾಗಿದೆ. ಇಂದು ಜಿಲ್ಲಾ ಮಟ್ಟದ 67ನೇ ಗಣರಾಜ್ಯೋತ್ಸವ ಸಮಾರಂಭವನ್ನು ಇದೇ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಈ ಮೊದಲು ಅಜ್ಜರಕಾಡಿನಲ್ಲಿರುವ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತಿದ್ದವು. ಆದರೆ ಅಲ್ಲಿ ಸಿಂಥೆಟಿಕ್ ಟ್ರಾಕ್‌ನ್ನು ಅಳವಡಿಸಿದ ಬಳಿಕ ಅಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯಲು ಅವಕಾಶ ನೀಡಲಾಗುತ್ತಿಲ್ಲ. ಆದಿ ಉಡುಪಿ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಿದ ಬಳಿಕ ಅಲ್ಲೂ ಸಾರ್ವಜನಿಕ ಸಮಾರಂಭಕ್ಕೆ ಅವಕಾಶ ಇಲ್ಲವಾಯಿತು. ಆದುದರಿಂದ ಕಳೆದೆರಡು ಮೂರು ವರ್ಷಗಳಿಂದ ಎಂಜಿಎಂ ಕಾಲೇಜಿನ ಮೈದಾನದಲ್ಲೇ ಎಲ್ಲಾ ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಸಮಾರಂಭಗಳು ನಡೆಯುತಿದ್ದವು. ಈ ಮೊದಲು ಅಜ್ಜರಕಾಡಿನಲ್ಲಿರುವ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತಿದ್ದವು. ಆದರೆ ಅಲ್ಲಿ ಸಿಂಥೆಟಿಕ್ ಟ್ರಾಕ್‌ನ್ನು ಅಳವಡಿಸಿದ ಬಳಿಕ ಅಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯಲು ಅವಕಾಶ ನೀಡಲಾಗುತ್ತಿಲ್ಲ. ಆದಿ ಉಡುಪಿ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಿದ ಬಳಿಕ ಅಲ್ಲೂ ಸಾರ್ವಜನಿಕ

ಸಮಾರಂಕ್ಕೆಅವಕಾಶಇಲ್ಲವಾಯಿತು.ಆದುದರಿಂದಕಳೆದೆರಡುಮೂರುವರ್ಷಗಳಿಂದಎಂಜಿಎಂಕಾಲೇಜಿನಮೈದಾನದಲ್ಲೇಎಲ್ಲಾಸಾರ್ವಜನಿಕಹಾಗೂಸಾಂಸ್ಕೃತಿಕಸಮಾರಂಗಳು ನಡೆಯುತಿದ್ದವು. ಹೀಗಾಗಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮೀಸಲಾದ ಮೈದಾನಕ್ಕಾಗಿ ಬಹುಕಾಲದ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ 98 ಲಕ್ಷರೂ.ಗಳ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಈ ಮೈದಾನವನ್ನು ಅಭಿವೃದ್ಧಿ ಪಡಿಸಿದೆ. ಉಡುಪಿ ನಗರಸಭೆ ಇದಕ್ಕೆ ಮಹಾತ್ಮಗಾಂದಿ ಬಯಲು ರಂಗಮಂದಿರವೆಂದು ನಾಮಕರಣ ಮಾಡಿದೆ.


 ಇದರಿಂದ ಇನ್ನು ಮುಂದೆ ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ ಹಾಗೂ ರಾಜ್ಯೋತ್ಸವದಂಥ ಸಾರ್ವಜನಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮ ಗಳು, ಸಭೆ ಸಮಾರಂಭಗಳು, ಯಕ್ಷಗಾನ ಪ್ರದರ್ಶನ ಸಹ ನಡೆಯಲು ವಿಶಾಲವಾದ, ಆಕರ್ಷಕವಾದ ಮೈದಾನವೊಂದು ದೊರೆತಂತಾಗಿದೆ.


ಮೈದಾನದ ಸುತ್ತಲೂ ಆವರಣ ಗೋಡೆಯನ್ನು ನಿರ್ಮಿಸಲಾಗಿದೆ. ಅದಕ್ಕೆ ಆರು ಗೇಟುಗಳನ್ನು ಅಳವಡಿಸಲಾಗಿದೆ. ಒಂದರಿಂದ ಒಂದೂವರೆ ಸಾವಿರ ಮಂದಿ ಆರಾಮವಾಗಿ ಇಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಮೈದಾನದಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯನ್ನು ಸಹ ನಿರ್ಮಿಸಲಾಗಿದೆ. ಇದಕ್ಕಿಂತ ಹೆಚ್ಚಾಗಿ ಮೈದಾನದ ಸುತ್ತಲೂ ರಸ್ತೆಗಳಿದ್ದು, ಜನರಿಗೆ ಬರಲು, ಹೋಗಲು ಅನುಕೂಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News