×
Ad

ಮೂಡುಬಿದಿರೆ: ಹಿರಿಯ ಹಾಗೂ ಕಿರಿಯ ಎನ್.ಸಿ.ಸಿ. ವಿದ್ಯಾರ್ಥಿಗಳಿಗೆ ಪಥಸಂಚಲನ ಸ್ಪರ್ಧೆ

Update: 2016-01-26 20:05 IST

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಎನ್.ಸಿ.ಸಿ. ಮಂಗಳೂರು ಗ್ರೂಪ್ ಜಂಟಿಯಾಗಿ 67ನೇ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಹಿರಿಯ ಹಾಗೂ ಕಿರಿಯ ಎನ್.ಸಿ.ಸಿ. ವಿದ್ಯಾರ್ಥಿಗಳಿಗೆ ಪಥಸಂಚಲನ ಸ್ಪರ್ಧೆಯನ್ನು ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಸಭಾಂಗಣದ ಪರೇಡ್ ಮೈದಾನದಲ್ಲಿ ನೆರವೇರಿತು.

 ಮಹಾವೀರ ಕಾಲೇಜಿನ ಭೂದಳವು ಪ್ರಥಮ, ಆಳ್ವಾಸ್ ಕಾಲೇಜಿನ ಎನ್.ಸಿ.ಸಿ. ಭೂದಳವು ದ್ವಿತೀಯ ಸ್ಥಾನವನ್ನು ಪಡೆಯಿತು.


ಕಿರಿಯ ವಿಭಾಗದಲ್ಲಿ ಜೈನ್ ಪ್ರೌಢಶಾಲೆಯ ಎನ್.ಸಿ.ಸಿ. ಭೂದಳವು ಪ್ರಥಮ, ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯು ದ್ವಿತೀಯ ಸ್ಥಾನವನ್ನು ಪಡೆದವು.


ಪಥಸಂಚಲನ ಸ್ಪರ್ಧೆಯಲ್ಲಿ ಮಹಾವೀರ ಕಾಲೇಜು, ಧವಳಾ ಕಾಲೇಜು, ಆಳ್ವಾಸ್ ಕಾಲೇಜು (ಭೂದಳ, ನೌಕಾದಳ, ವಾಯುದಳ), ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಜೈನ್ ಪ್ರೌಢಶಾಲೆ, ಎಸ್.ಎಂ.ಪಿ. ಪ್ರೌಢಶಾಲೆ ಬೆಳುವಾಯಿ, ಶ್ರೀ ವಿವೇಕಾನಂದ ಪದವಿ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವಾ ಮಾತನಾಡಿ, ನಾವೆಲ್ಲಾ ಎನ್.ಸಿ.ಸಿ.ಯ ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗೋಣ ಎಂದರು.
18 ನೇ ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಎಂ.ಆರ್.ಚೌಧರಿ, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ರೇಜಿ ಪಿಲಿಫೋಸ್, ಟ್ರಸ್ಟಿ ವಿವೇಕ್ ಆಳ್ವಾ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡಿಸ್ ಭಾಗವಹಿಸಿದ್ದರು.


ಆಳ್ವಾಸ್ ಕಾಲೇಜಿನ ಎನ್.ಸಿ.ಸಿ. ಅಧಿಕಾರಿಗಳಾದ ಲೆಫ್ಟಿನೆಂಟ್ ಡಾ.ರಾಜೇಶ್ ಬಿ., ಸಬ್ ಲೆಫ್ಟಿನೆಂಟ್ ರಾಕೇಶ್ ಶೆಟ್ಟಿ, ಪರ್ವೇಜ್ ಮತ್ತು ಎನ್.ಸಿ.ಸಿ. ಕೆಡೆಟ್‌ಗಳು ಕಾರ್ಯಕ್ರಮ ನಿರ್ವಹಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News