ಮಲಾರ್ :ಗಣರಾಜ್ಯೋತ್ಸವ ಕಾರ್ಯಕ್ರಮದೊಂದಿಗೆ ಗಣಿತ ಮೇಳ
ಕೊಣಾಜೆ: ಪಾವೂರು ಗ್ರಾಮದ ಮಲಾರ್ ಬದ್ರಿಯಾ ನಗರ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಗಣಿತ ಮೇಳದೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು.
ಶಾಲೆಯ ಶಿಕ್ಷಕ-ಶಿಕ್ಷಕಿಯರು, ಹೆತ್ತವರ ನೆರವಿನಿಂದ ವಿದ್ಯಾರ್ಥಿ0ಗಳು ತರಕಾರಿ ಅಂಗಡಿ, ಚಹಾ, ತಿಂಡಿ-ತಿನಿಸುಗಳು ಕ್ಯಾಂಟೀನ್ ಜೊತೆ ಇತರ ಸಾಮಗ್ರಿಗಳನ್ನು ಮಾರಾಟ ಮಾಡುವ ಮೂಲಕ ವ್ಯವಹಾರ ಜ್ಞಾನ ಪಡೆದರು. ಅಲ್ಲದೆ ಗಣಿತದ ಮೂಲ ಕ್ರಿಯೆಗಳು, ಆಕೃತಿಗಳು, ಔಪಚಾರಿಕ ಮತ್ತು ಅನೌಪಚಾರಿಕ ಅಳತೆಗೋಳು, ರೇಖಾಗಣಿತ, ಭಿನ್ನರಾಶಿ, ಕೋನಗಳ ರಂಗೋಲಿಗಳು-ಆಕೃತಿಗಳ ಪ್ರದರ್ಶನ ನಡೆಸಿ ಗ್ರಾಮಸ್ಥರನ್ನು ಪುಳಕಗೊಳಿಸಿದರು. ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿನಾರಾಯಣ ಭಟ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ ಶ್ಯಾನ್‌ಭಾಗ್, ಕೊಣಾಜೆ ಪದವು ಸಿಆರ್‌ಪಿ ಸುಗುಣಾ, ಮುನ್ನೂರು ಸಿಆರ್‌ಪಿ ವತ್ಸಲಾ ಜೋಗಿ, ತಾ.ಪಂ. ಸದಸ್ಯ ಮುಹಮ್ಮದ್ ಮೋನು, ಗ್ರಾ.ಪಂ. ಸದಸ್ಯ ಎಂ.ಪಿ.ಹಸನ್, ಗ್ರಾಪಂ ಮಾಜಿ ಸದಸ್ಯ ಮುಹಮ್ಮದ್ ಬದ್ರಿಯಾನಗರ, ಪತ್ರಕರ್ತ ಹಂಝ ಮಲಾರ್, ಉದ್ಯಮಿಗಳಾದ ಇಸ್ಮಾಯಿಲ್ ಎಸ್.ಎಂ., ಅಸ್ಲಾಂ, ಎಸ್‌ಡಿಎಂಸಿ ಅಧ್ಯಕ್ಷ ಆರ್.ಮಜೀದ್ ಉಪಸ್ಥಿತರಿದ್ದು ಪ್ರೋತ್ಸಾಹ ನೀಡಿದರು.