×
Ad

ಮೂಡುಬಿದಿರೆ : ದಿಗಂಬರ ಜೈನ ವಿದ್ಯಾವರ್ಧಕ ಸಂಘದಿಂದ ಗಣರಾಜ್ಯೋತ್ಸವ

Update: 2016-01-26 20:25 IST

ಭಾರತದಲ್ಲಿ ಸರ್ವಶ್ರೇಷ್ಠವಾದ ಸಂವಿಧಾನವಿದೆ : ಅಭಿಜಿತ್ ಜೈನ್

ಮೂಡುಬಿದಿರೆ: ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಆಶ್ರಿತ ಸಂಸ್ಥೆಗಳಿಂದ ಬೆಟ್ಕೇರಿ ಮೈದಾನದಲ್ಲಿ 67ನೇ ಗಣರಾಜ್ಯೋತ್ಸವನ್ನು ದಿನವನ್ನು ಆಚರಿಸಲಾಯಿತು. ಸಂಘದ ಕಾರ್ಯದರ್ಶಿ ಅಭಿಜಿತ್ ಎಂ. ದ್ವಜಾರೋಹಣಗೈದು, ಪಥವೀಕ್ಷಣೆ, ಪಥಸಂಚಲನದಲ್ಲಿ ವಿದ್ಯಾರ್ಥಿಗಳಿಂದ ಗೌರವರಕ್ಷೆ ಸ್ವೀಕರಿಸಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದಲ್ಲಿ ಸರ್ವಶ್ರೇಷ್ಠವಾದ ಸಂವಿಧಾನವಿದೆ. ಹಕ್ಕುಗಳನ್ನು ಪಡೆಯುವ ಹಾಗೂ ಕರ್ತವ್ಯವನ್ನು ನಿರ್ವಹಿಸುವ ಸ್ವಾತಂತ್ರ್ಯ ನಮ್ಮೆಲ್ಲರಿಗಿದೆ. ಅವುಗಳನ್ನು ವಿವೇಚನೆಯಿಂದ ಅನುಷ್ಠಾನಗೊಳಿಸಿದಾಗ, ದೇಶಕ್ಕೆ ಪೂರಕವಾಗಿರುತ್ತದೆ ಎಂದರು. ಶ್ರೀಧವಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ರವೀಶ್ ಕುಮಾರ್, ಜೈನ.ಪೂ ಕಾಲೇಜಿನ ಪ್ರಾಂಶುಪಾಲ ಮಧುಕರ ಸಾಲಿನ್ಸ್, ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮೋಹನರಾಜ್ ಚೌಟ, ಡಿ.ಜೆ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಶಿಕಾಂತ್ ವೈ.ಜೈನ್, ಆಂಗ್ಲ ಮಾಧ್ಯಮ ಶಾಲೆಯ ಡಾ.ಗುರು ಬಾಗೇವಾಡಿ, ಸಂಸ್ಥೆಯ ಪ್ರಾಧ್ಯಪಕರು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಗಳು, ನಿವೃತ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

3 ಸಾವಿರ ವಿದ್ಯಾರ್ಥಿಗಳಿಂದ ನಾಡಗೀತೆ:

ಸಂಘದ ಆಶ್ರಿತ ಸಂಸ್ಥೆಗಳಾದ ಶ್ರೀಧವಲಾ ಕಾಲೇಜು, ಜೈನ ಪದವಿಪೂರ್ವ ಕಾಲೇಜು, ಜೈನ ಪ್ರೌಢಶಾಲೆ, ಡಿ.ಜೆ ಅನುದಾನಿತ ಕನ್ನಡ ಮಾಧ್ಯಮ ಶಾಲೆ, ಡಿ.ಜೆ ಆಂಗ್ಲಮಾಧ್ಯಮ ಶಾಲೆಯ ಒಟ್ಟು 3,000 ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News